×
Ad

ಕಾರ್ಮಿಕ ಸಚಿವಾಲಯದ ಇನ್ನೂ 25 ಅಧಿಕಾರಿಗಳಿಗೆ ಕೊರೋನ ಸೋಂಕು

Update: 2020-06-12 19:59 IST

ಹೊಸದಿಲ್ಲಿ, ಜೂ.12: ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಸುಮಾರು 25 ಅಧಿಕಾರಿಗಳಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ಪರೀಕ್ಷೆಯಲ್ಲಿ ಶುಕ್ರವಾರ ದೃಢಪಟ್ಟಿದ್ದು, ಇದರೊಂದಿಗೆ ಸಚಿವಾಲಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 36ಕ್ಕೇರಿದೆ.

 ಸಚಿವಾಲಯದ ಕೆಲವು ಅಧಿಕಾರಿಗಳಿಗೂ ಕೂಡಾ ಕೊರೋನ ಸೋಂಕು ತಗಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆಯೆಂದು ಮೂಲಗಳು ತಿಳಿಸಿವೆ. ಸೋಂಕಿತರ ಪೈಕಿ ಆರು ಮಂದಿ,ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ಖಾಸಗಿ ಸಿಬ್ಬಂದಿಯೆಂದು ತಿಳಿದುಬಂದಿದೆ.

  ಕಳೆದ ವಾರ ಇಬ್ಬರು ಉದ್ಯೋಗಿಗಳಲ್ಲಿ ಕೋವಿಡ್-19 ಸೋಂಕು ಪತ್ತೆಯಾದ ಬಳಿಕ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಕಟ್ಟಡ ‘ಶ್ರಮಶಕ್ತಿ ಭವನ’ವನ್ನು ಸೀಲ್‌ಡೌನ್ ಮಾಡಲಾಗಿತ್ತು ಹಾಗೂ ಸಚಿವಾಲಯದ ಇತರ ಸಿಬ್ಬಂದಿಯನ್ನು ಕೂಡಾ ಪರೀಕ್ಷಿಸಲಾಗಿತ್ತು.

  ಈ ಮೊದಲು ಸೋಂಕಿತರಾದವರಲ್ಲಿ ಓರ್ವ ಜಂಟಿ ಕಾರ್ಯದರ್ಶಿ, ಶೀಘ್ರಲಿಪಿಕಾರ (ಸ್ಟೆನೋ), ಪ್ರಧಾನ ಖಾಸಗಿ ಕಾರ್ಯದರ್ಶಿ, ಖಾಸಗಿ ಕಾರ್ಯದರ್ಶಿ ಹಾಗೂ ಆರು ಸಹಾಯಕ ಅಧಿಕಾರಿಗಳು ಮತ್ತೋರ್ವ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಚಾಲಕ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News