39.5 ಕೋಟಿ ಜನರನ್ನು ಕಡುಬಡತನಕ್ಕೆ ತಳ್ಳಲಿರುವ ಕೊರೋನ ವೈರಸ್: ವರದಿ

Update: 2020-06-12 15:39 GMT

ಲಂಡನ್, ಜೂ. 12: ಕೊರೋನ ವೈರಸ್ ಸಾಂಕ್ರಾಮಿಕದ ಆರ್ಥಿಕ ದುಷ್ಪರಿಣಾಮಗಳ ಪರಿಣಾಮವಾಗಿ ಜಗತ್ತಿನಾದ್ಯಂತ ಇನ್ನೂ 39.5 ಕೋಟಿ ಮಂದಿ ಕಡು ಬಡತನದ ತೆಕ್ಕೆಗೆ ಜಾರಲಿದ್ದಾರೆ ಹಾಗೂ ಕಡು ಬಡವರ ಒಟ್ಟು ಸಂಖ್ಯೆಯು 100 ಕೋಟಿಯನ್ನೂ ಮೀರಲಿದೆ ಎಂದು ಸಂಶೋಧನಾ ವರದಿಯೊಂದು ಶುಕ್ರವಾರ ತಿಳಿಸಿದೆ.

ದಿನಕ್ಕೆ 1.90 ಡಾಲರ್ (ಸುಮಾರು 144 ರೂಪಾಯಿ)ಗಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿರುವವರನ್ನು ಕಡು ಬಡವರು ಎಂಬುದಾಗಿ ಈ ಅಧ್ಯಯನವು ಪರಿಗಣಿಸಿದೆ.

ತಲಾವಾರು ಆದಾಯವು 20 ಶೇಕಡದಷ್ಟು ಕುಸಿದರೆ, ಕಡುಬಡತನದಲ್ಲಿ ಜೀವಿಸುವವರ ಸಂಖ್ಯೆಯು 112 ಕೋಟಿಗೆ ಏರಲಿದೆ ಎಂದು ವಿಶ್ವಸಂಸ್ಥೆಯ ವಿಶ್ವವಿದ್ಯಾನಿಲಯದ ಭಾಗವಾಗಿರುವ ಯುಎನ್‌ಯು-ವೈಡರ್ ಪ್ರಕಟಿಸಿದ ವರದಿ ತಿಳಿಸಿದೆ.

ಕೊರೋನ ವೈರಸ್‌ನಿಂದಾಗಿ ಕನಿಷ್ಠ 3 ಲಕ್ಷ ಆಫ್ರಿಕನ್ನರು ಸಾಯುತ್ತಾರೆ ಎಂದು ವಿಶ್ವಸಂಸ್ಥೆಯ ಆಫ್ರಿಕಕ್ಕಾಗಿನ ಹಣಕಾಸು ಆಯೋಗ (ಯುಎನ್‌ಇಸಿಎ) ಶುಕ್ರವಾರ ತಿಳಿಸಿದೆ. ಅದೇ ವೇಳೆ, ಕೋಟ್ಯಂತರ ಮಂದಿ ಕಡು ಬಡತನದ ಅಂಚಿಗೆ ತಳ್ಳಲ್ಪಡುವ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News