×
Ad

ಹಾರ್ವರ್ಡ್ ವಿವಿಯಲ್ಲಿ ಪತ್ರಿಕೋದ್ಯಮ ಪ್ರೊಫೆಸರ್ ಆಗಲಿರುವ ನಿಧಿ ರಾಝ್‍ದಾನ್

Update: 2020-06-13 17:07 IST

ಹೊಸದಿಲ್ಲಿ : ಎನ್‍ಡಿಟಿವಿಯ ಖ್ಯಾತ ಪತ್ರಕರ್ತೆ ನಿಧಿ ರಾಝ್‍ದಾನ್ ತಾವು ಎನ್‍ಡಿಟಿವಿಯಲ್ಲಿನ ಉದ್ಯೋಗ ತೊರೆಯುತ್ತಿರುವುದಾಗಿ ಇಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಆಟ್ರ್ಸ್ ಎಂಡ್ ಸಾಯನ್ಸಸ್ ವಿಭಾಗದಲ್ಲಿ ಪತ್ರಿಕೋದ್ಯಮ ಅಸೋಸಿಯೇಟ್ ಫ್ರೊಫೆಸರ್ ಆಗಿ ತಾವು ಮುಂದೆ ಕಾರ್ಯನಿರ್ವಹಿಸುವುದಾಗಿ ನಿಧಿ ಹೇಳಿದ್ದಾರೆ. ಎನ್‍ಡಿಟಿವಿ ಜತೆ ಕಳೆದ 21 ವರ್ಷಗಳಿಂದ ನಿಧಿ ಕೆಲಸ ಮಾಡುತ್ತಿದ್ದಾರೆ.

"ಎನ್‍ಡಿಟಿವಿ ನನಗೆ ಎಲ್ಲವನ್ನೂ ಕಲಿಸಿದೆ. ಅದು ನನಗೆ ಮನೆಯಿದ್ದಂತೆ. ಬಹಳಷ್ಟು ಮಾಧ್ಯಮ ತಮ್ಮ ವಸ್ತುನಿಷ್ಠತೆಯನ್ನು ಕಳೆದುಕೊಂಡಿರುವ ಇಂದಿನ ಸಮಯದಲ್ಲಿ ನಾವು ಅಲ್ಲಿ ಮಾಡುವ ಕೆಲಸದ ಬಗ್ಗೆ ಹಾಗೂ ನಾವು ಎತ್ತಿ ಹಿಡಿದಿರುವ ಮೌಲ್ಯಗಳ ಬಗ್ಗೆ ನನಗೆ ಹೆಮ್ಮೆಯಿದೆ,'' ಎಂದು ಅವರು ತಮ್ಮ ಟ್ವೀಟ್‍ನಲ್ಲಿ ಹೇಳಿದ್ದಾರೆ.

ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆಕೆ ಮಾಡಿದ ವರದಿಗಾರಿಕೆಗೆ ಆಕೆಗೆ ಇತ್ತೀಚೆಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಪ್ರೆಸ್ ಇನ್‍ಸ್ಟಿಟ್ಯೂಟ್ ಇಂಡಿಯಾ ಪ್ರಶಸ್ತಿ ದಕ್ಕಿತ್ತು.

ತಮ್ಮ ವೃತ್ತಿಯ ಆರಂಭದಲ್ಲಿ ಎನ್‍ಡಿಟಿವಿಯ ರಾತ್ರಿ ಸುದ್ದಿ ಬುಲೆಟಿನ್ ನಿರ್ವಹಿಸುತ್ತಿದ್ದ ನಿಧಿ ನಂತರ 'ಲೆಫ್ಟ್ ರೈಟ್ ಎಂಡ್ ಸೆಂಟರ್' ಕಾರ್ಯಕ್ರಮದ ಮೂಲಕ ಜನಪ್ರಿಯರಾದರು. ಅವರು 'ಲೆಫ್ಟ್ ರೈಟ್ ಎಂಡ್ ಸೆಂಟರ್ : ದಿ ಐಡಿಯಾ ಆಫ್ ಇಂಡಿಯಾ' ಎಂಬ ಕೃತಿಯನ್ನೂ ರಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News