ಝಕರ್ ಬರ್ಗ್ ರನ್ನು ಟೀಕಿಸಿದ್ದ ಫೇಸ್‌ಬುಕ್ ಉದ್ಯೋಗಿ ವಜಾ

Update: 2020-06-13 16:31 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜೂ. 13: ಈ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಕಿರುವ ಪ್ರಚೋದನಾತ್ಮಕ ಸಂದೇಶಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದಕ್ಕಾಗಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ರನ್ನು ಟೀಕಿಸಿರುವ ಉದ್ಯೋಗಿಯೊಬ್ಬರನ್ನು ಫೇಸ್‌ಬುಕ್ ಕೆಲಸದಿಂದ ವಜಾಗೊಳಿಸಿದೆ.

“ನನ್ನ ಸಹೋದ್ಯೋಗಿಯೊಬ್ಬರು ಪ್ರಕಟಿಸುತ್ತಿದ್ದ ಡೆವೆಲಪರ್ ಡಾಕ್ಯುಮೆಂಟ್ಸ್‌ನಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಚಳವಳಿಗೆ ಬೆಂಬಲ ಸೂಚಿಸುವ ಹೇಳಿಕೆಯೊಂದನ್ನು ಪ್ರಕಟಿಸಲು ನಾನು ಅವರನ್ನು ಕೋರಿದ್ದೆ. ಅವರು ಅದನ್ನು ಪ್ರಕಟಿಸಿಲು ನಿರಾಕರಿಸಿದ್ದರು. ಈಗ ಸಹೋದ್ಯೋಗಿಯೊಬ್ಬರಿಗೆ ಸಾರ್ವಜನಿಕವಾಗಿ ಬೈದಿರುವುದಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ” ಎಂದು ಫೇಸ್‌ಬುಕ್‌ನ ಸಿಯಾಟಲ್ ಕಚೇರಿಯಲ್ಲಿ ಯೂಸರ್ ಇಂಟರ್‌ಫೇಸ್ ಇಂಜಿನಿಯರ್ ಆಗಿರುವ ಬ್ರಾಂಡನ್ ಡೈಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳ ಬಗ್ಗೆ ಅಧ್ಯಕ್ಷ ಟ್ರಂಪ್‌ರ ಪ್ರಚೋದನಾತ್ಮಕ ಹೇಳಿಕೆಗಳನ್ನು ಝುಕರ್‌ಬರ್ಗ್ ನಿಭಾಯಿಸುತ್ತಿರುವ ರೀತಿಯನ್ನು ಫೇಸ್‌ಬುಕ್‌ನ ಹಲವು ಉದ್ಯೋಗಿಗಳು ಇತ್ತೀಚೆಗೆ ಪ್ರತಿಭಟಿಸಿದ್ದರು. ಅದರಲ್ಲಿ ಡೈಲ್ ಮತ್ತು ಅವರ ತಂಡದ ಇತರ ಆರು ಇಂಜಿನಿಯರ್‌ಗಳೂ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News