ಕೊಲೆ ಪ್ರಕರಣದ ದೋಷಿ, ಪಕ್ಷದ ಸ್ಥಳೀಯ ನಾಯಕನಿಗೆ ಪಿಣರಾಯಿ ವಿಜಯನ್ ಸೇರಿ ಸಿಪಿಎಂ ನಾಯಕರ ಅಂತಿಮ ನಮನ

Update: 2020-06-13 17:09 GMT

ಕೊಚ್ಚಿ: 2014ರಲ್ಲಿ ನಡೆದ ಕೊಲೆ ಪ್ರಕರಣವೊಂದರದಲ್ಲಿ ದೋಷಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಸ್ಥಳೀಯ ಸಿಪಿಎಂ ನಾಯಕರೊಬ್ಬರಿಗೆ ಕೇರಳದ ಸಿಪಿಎಂ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಿಪಿಎಂ ನಾಯಕ ಪಿ.ಕೆ. ಕುಂಞನಾಥನ್ (72) ತಿರುವನಂತಪುರಂನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.  

ಸಿಪಿಎಂನ ಬಂಡಾಯ ನಾಯಕ ಟಿ.ಪಿ. ಚಂದ್ರಶೇಖರನ್ ರನ್ನು 2012ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ ಕುಂಞನಾಥನ್ ಮತ್ತು ಇತರ 11 ಮಂದಿ ದೋಷಿಗಳಾಗಿದ್ದರು.

ಮೃತ ಕುಂಞನಾಥನ್ ರಿಗೆ ಸಿಎಂ ಪಿಣರಾಯಿ ವಿಜಯನ್ ಸೇರಿ ಹಲವು ಸಿಪಿಎಂ ನಾಯಕರು ಅಂತಿಮ ನಮನವನ್ನು ಸಲ್ಲಿಸಿದ್ದಾರೆ. “ಪಕ್ಷವನ್ನು ಪ್ರೀತಿಸಿದ ಕಾಮ್ರೇಡ್ ಮತ್ತು ಸಮಾಜದೆಡೆಗೆ ತನ್ನ ಕಾಳಜಿಯನ್ನು ವ್ಯಕ್ತಪಡಿಸಿದವರು. ಪಾನೂರಿನಲ್ಲಿ ಅವರು ಸಮಾಜದ ಎಲ್ಲಾ ಜನರ ಪ್ರೀತಿಯನ್ನು ಗಳಿಸಿದ್ದರು” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News