×
Ad

‘ಮೂರ್ಖತನ’: ಲಾಕ್‌ಡೌನ್ ಹಂತದ ಕೊರೋನ ಪ್ರಕರಣಗಳ ರೇಖಾಚಿತ್ರ ಟ್ವೀಟ್ ಮಾಡಿದ ರಾಹುಲ್

Update: 2020-06-13 23:01 IST

ಹೊಸದಿಲ್ಲಿ, ಜೂ.13: ಲಾಕ್‌ಡೌನ್‌ನ ಪ್ರತೀ ಹಂತದಲ್ಲೂ ಕೊರೋನ ಸೋಂಕು ಪ್ರಕರಣಗಳಲ್ಲಿ ಅವಿರತ ಹೆಚ್ಚಳವಾಗುತ್ತಿರುವುದನ್ನು ಸೂಚಿಸುವ ನಾಲ್ಕು ರೇಖಾಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಿ ವಿಭಿನ್ನ ಫಲಿತಾಂಶ ನಿರೀಕ್ಷಿಸುವುದು ಮೂರ್ಖತನವಾಗಿದೆ ಎಂದು ಈ ಪೋಸ್ಟ್‌ಗೆ ಅಡಿಬರಹ ನೀಡಿದ್ದಾರೆ.

ಶನಿವಾರದ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ ದೇಶದಲ್ಲಿ 11,000 ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದೆ ಎಂದು ವರದಿಯಾದ ಬಳಿಕ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ರೇಖಾಚಿತ್ರದಲ್ಲಿ ದೇಶದಲ್ಲಿ ಮೂಲ ಸಂಖ್ಯೆ ಶೂನ್ಯದಿಂದ 7,500ಕ್ಕೆ ಏಕಪ್ರಕಾರವಾಗಿ ಏರಿಕೆಯಾಗಿರುವುದನ್ನು ತೋರಿಸಲಾಗಿದೆ. ಕೊರೋನ ಸೋಂಕು ಪ್ರಕರಣದ ನಿರ್ವಹಣೆಯ ಬಗ್ಗೆ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸುತ್ತಿರುವ ರಾಹುಲ್, ಕಳೆದ ವಾರ ಮತ್ತೊಂದು ರೇಖಾಚಿತ್ರ ಪೋಸ್ಟ್ ಮಾಡಿದ್ದರು. ಇದರಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೇಗೆ ಲಾಕ್‌ಡೌನ್ ವಿಫಲವಾಗಿದೆ ಎಂಬುದನ್ನು ತೋರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News