ಲಾಕ್‌ಡೌನ್ ಎಫೆಕ್ಟ್: ಮೇ ತಿಂಗಳಲ್ಲಿ ಆಹಾರ ಹಣದುಬ್ಬರ 9.28 ಶೇ.ಏರಿಕೆ

Update: 2020-06-13 17:32 GMT

ಹೊಸದಿಲ್ಲಿ,ಜೂ.13: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಶುಕ್ರವಾರ ಚಿಲ್ಲರೆ ಹಣದುಬ್ಬರ ದತ್ತಾಂಶವನ್ನು ಭಾಗಶಃ ಬಿಡುಗಡೆಗೊಳಿಸಿದ್ದು, ಅದು ಮೇ ತಿಂಗಳಲ್ಲಿ ಆಹಾರವಸ್ತುಗಳ ದರಗಳು 9.29 ಶೇಕಡಕ್ಕೆ ಏರಿಕೆಯಾಗಿರುವುದನ್ನು ಸೂಚಿಸಿದೆ.

ಗ್ರಾಮೀಣ, ನಗರ ಹಾಗೂ ಸಂಯೋಜಿತ ವಲಯಗಳಲ್ಲಿ 2020ರ ಮೇ ತಿಂಗಳಲ್ಲಿ ಗ್ರಾಹಕ ಆಹಾರ ದರ ಸೂಚ್ಯಂಕವು (ಸಿಪಿಪಿಐ) ಕ್ರಮವಾಗಿ 9.69 ಶೇ., 8.36 ಶೇ. ಹಾಗೂ 9.28 ಶೇ. ಆಗಿದ್ದವು ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

 2019ರ ಮೇ ತಿಂಗಳಲ್ಲಿ ಸಂಪೂರ್ಣ ಗ್ರಾಹಕ ಆಹಾರ ದರ ಸೂಚ್ಯಂಕ (ಸಿಎಫ್‌ಪಿಐ)ವು ಆಹಾರ ಹಣದುಬ್ಬರ ದರವು 1.83 ಶೇಕಡ ಆಗಿತ್ತು.

ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಲಾಕ್ ಡೌನ್ ಹೇರಲಾಗಿದ್ದರಿಂದ ಕೇಂದ್ರ ಸರಕಾರವು ಸತತ ಎರಡನೆ ತಿಂಗಳು ಕೂಡಾ ಚಿಲ್ಲರೆ ಹಣದುಬ್ಬರದ ಮೊಟಕುಗೊಳಿಸಲಾದ ದತ್ತಾಂಶವನ್ನು ಬಿಡುಗಡೆಗೊಳಿಸಿದೆ. ಎಪ್ರಿಲ್‌ನಲ್ಲಿಯೂ ಅಂಕಿಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಚಿಲ್ಲರೆ ಹಣದುಬ್ಬರದ ಮೊಟಕುಗೊಳಿಸಿದ ದತ್ತಾಂಶವನ್ನು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News