ಭೂಪಟ ಪರಿಷ್ಕರಿಸುವ ನೇಪಾಳದ ಕ್ರಮಕ್ಕೆ ಭಾರತದ ತಿರಸ್ಕಾರ

Update: 2020-06-13 17:37 GMT

ಹೊಸದಿಲ್ಲಿ,ಜೂ.13: ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಮತ್ತು ಭಾರತೀಯ ಭೂಪ್ರದೇಶಗಳನ್ನು ಸೇರಿಸಿಕೊಂಡು ತನ್ನ ಭೂಪಟವನ್ನು ಪರಿಷ್ಕರಿಸುವ ನೇಪಾಳ ಸರಕಾರದ ಕ್ರಮವನ್ನು ಶನಿವಾರ ತಿರಸ್ಕರಿಸಿರುವ ಭಾರತವು,ಇದು ಸಮರ್ಥನೀಯವಲ್ಲ ಎಂದು ಹೇಳಿದೆ.

‘ಭಾರತೀಯ ಭೂಪ್ರದೇಶಗಳನ್ನು ಸೇರಿಸಿಕೊಂಡು ಭೂಪಟವನ್ನು ಪರಿಷ್ಕರಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿರುವುದನ್ನು ನಾವು ಗಮನಿಸಿದ್ದೇವೆ ’ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ ಶ್ರೀವಾಸ್ತವ ಅವರು, ‘ನೇಪಾಳವು ಭಾರತದ ಭೂಪ್ರದೇಶಗಳ ಮೇಲೆ ಹಕ್ಕು ಮಂಡಿಸಿರುವುದು ಐತಿಹಾಸಿಕ ಅಂಶಗಳು ಅಥವಾ ಸಾಕ್ಷಗಳನ್ನು ಆಧರಿಸಿಲ್ಲ ಮತ್ತು ಸಮರ್ಥನೀಯವಲ್ಲ. ನಾವು ಈ ವಿಷಯದಲ್ಲಿ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.ಅದು ಬಾಕಿಯಿರುವ ಗಡಿ ವಿಷಯಗಳ ಕುರಿತು ಮಾತುಕತೆಗಳನ್ನು ನಡೆಸುವ ನಮ್ಮ ಪ್ರಸಕ್ತ ತಿಳುವಳಿಕೆಯನ್ನೂ ಉಲ್ಲಂಘಿಸಿದೆ ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News