ಅಮಾನತು ಆಟವನ್ನು ಬದಲಾಯಿಸಿತು: ರಾಹುಲ್

Update: 2020-06-15 05:17 GMT

ಹೊಸದಿಲ್ಲಿ: ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ಆರೋಪದಲ್ಲಿ ಅಮಾನತುಗೊಂಡಿದ್ದ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಲೊಕೇಶ್ ರಾಹುಲ್ ಅವರು 2019 ರ ಅಮಾನತು ತನ್ನ ಆಟವನ್ನು ಸಂಪೂರ್ಣವಾಗಿ ಬದಲಿಸಿದೆ ಮತ್ತು ಈ ಘಟನೆಯ ಬಳಿಕ ಸ್ಥಿರ ಪ್ರದರ್ಶನ ಸಾಧ್ಯವಾಗಿದೆ ಎಂದು ನಂಬಿದ್ದಾರೆ.

    ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರು ‘ಕಾಫಿ ವಿಥ್ ಕರಣ್’ ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಲಘುವಾಗಿ ಮಾತನಾಡಿದ ನಂತರ ತೀವ್ರ ಟೀಕೆಗೆ ಗುರಿಯಾದರು ಮತ್ತು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅವರನ್ನು ತಂಡದಿಂದ ಅಮಾನತುಗೊಳಿಸಿತ್ತು.

  ನನ್ನ ಸ್ಥಿರ ಕಾರ್ಯಕ್ಷಮತೆಗೆ ಸಾಕಷ್ಟು ಮನ್ನಣೆ ಸಿಕ್ಕಿತು. ನಾನು 2019ರ ನಂತರ ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸಿದೆ. ಎಂದು ಪತ್ರಿಕೆಯೊಂದಕ್ಕೆ ತಿಳಿಸಿದರು.

  ರಿಷಭ್ ಪಂತ್ ರಾಹುಲ್ ಅವರನ್ನು ಪಕ್ಕಕ್ಕೆ ತಳ್ಳಿ ಐದು ಇನಿಂಗ್ಸ್‌ಗಳಲ್ಲಿ 75.75 ಸರಾಸರಿಯಲ್ಲಿ 303 ರನ್ ಗಳಿಸಿದ್ದಾರೆ ಮತ್ತು ಏಕದಿನ ಪಂದ್ಯಗಳಲ್ಲಿ 114.77 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

 ಟ್ವೆಂಟಿ-20 ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಬ್ಯಾಟ್ಸ್‌ಮನ್ ರಾಹುಲ್ 56.00 ಸರಾಸರಿಯಲ್ಲಿ 224 ರನ್ ಮತ್ತು ಸ್ಟ್ರೈಕ್ ರೇಟ್ 144.51 ಗಳಿಸಿದರು.

 ‘‘ನಮ್ಮ ವೃತ್ತಿಜೀವನವು ತುಂಬಾ ದೀರ್ಘವಾಗಿರುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು 2019ರ ನಂತರ ನನ್ನಲ್ಲಿ 12 ಅಥವಾ 11 ವರ್ಷಗಳು ಉಳಿದಿವೆ ಎಂದು ನಾನು ಅರಿತುಕೊಂಡೆ . ಆಟಗಾರ ಮತ್ತು ತಂಡದ ವ್ಯಕ್ತಿಯಾಗಲು ನನ್ನ ಸಮಯ ಮತ್ತು ಶಕ್ತಿಯನ್ನು ಅರ್ಪಿಸಬೇಕಾಗಿದೆ ’’ಎಂದು 28- ವರ್ಷ ವಯಸ್ಸಿನ ರಾಹುಲ್ ಹೇಳಿದರು.

‘‘ಬದಲಾವಣೆಯು ನಿಜವಾಗಿಯೂ ಸಹಾಯ ಮಾಡಿತು. ತಂಡಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಚಾಂಪಿಯನ್ ತಂಡಗಳ ಭಾಗವಾಗಲು ಮತ್ತು ಆಟದಲ್ಲಿ ವ್ಯತ್ಯಾಸವ ನ್ನುಂಟುಮಾಡಲು ನಾನು ಬಯಸಿದಾಗ ನನ್ನ ಮೇಲೆ ಹೆಚ್ಚಿನ ಒತ್ತಡವನ್ನು ತೆಗೆದುಕೊಂಡೆ’’ ಎಂದರು.

    ರೋಹಿತ್ ಶರ್ಮಾ ಅವರ ಬೆಂಬಲವನ್ನು ಸ್ಮರಿಸಿದ ರಾಹುಲ್ ಅವರು ತಾನು ಭಾರತ ಸೀಮಿತ ಓವರ್‌ಗಳ ತಂಡದ ಉಪನಾಯಕ ರೋಹಿತ್ ಅವರ ಬ್ಯಾಟಿಂಗ್‌ನ ದೊಡ್ಡ ಅಭಿಮಾನಿ ಎಂದು ಹೇಳಿದರು. ರೋಹಿತ್ ಅವರು ತನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ರಾಹುಲ್ ಧನ್ಯವಾದ ಅರ್ಪಿಸಿದರು.

 ‘‘ಅವರು ನನ್ನ ಮೇಲೆ ಸಾಕಷ್ಟು ನಂಬಿಕೆಯನ್ನು ಹೊಂದಿದ್ದಾರೆ ಮತ್ತು ಹಿರಿಯ ಆಟಗಾರನಾಗಿ, ಅವರು ನನ್ನನ್ನು ಬೆಂಬಲಿಸಿದ್ದಾರೆ ಮತ್ತು ನನ್ನೊಂದಿಗೆ ನಿಂತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News