ಮೆಲ್ಬೋರ್ನ್‌ನ ವಸತಿ ಬಡಾವಣೆ ರಸ್ತೆಗಳಿಗೆ ಸಚಿನ್, ಕೊಹ್ಲಿ, ಕಪಿಲ್ ಹೆಸರು

Update: 2020-06-15 18:15 GMT

ಮೆಲ್ಬೋರ್ನ್, ಜೂ.15: ಮೆಲ್ಬೋರ್ನ್‌ನ ರಾಕ್‌ಬ್ಯಾಂಕ್ ಉಪನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಬಡಾವಣೆಯ ರಸ್ತೆಗಳಿಗೆ ಸಚಿನ್ ತೆಂಡುಲ್ಕರ್, ಕಪಿಲ್ ದೇವ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಭಾರತೀಯ ಕ್ರಿಕೆಟ್ ಶ್ರೇಷ್ಠರ ಹೆಸರನ್ನು ಇಡಲಾಗಿದೆ.ಅಕೋಲೇಡ್ ಎಸ್ಟೇಟ್ ಅಭಿವೃದ್ಧಿಪಡಿಸಿರುವ ಈ ಎಸ್ಟೇಟ್‌ನ್ನು ಖರೀದಿದಾರರಿಗೆ ‘ತೆಂಡುಲ್ಕರ್ ಡ್ರೈವ್’, ‘ಕೊಹ್ಲಿ ಕ್ರೆಸೆಂಟ್’ಮತ್ತು ‘ದೇವ್ ಟೆರೇಸ್’ ಹೆಸರಿನೊಂದಿಗೆ ಗಮನ ಸೆಳೆಯಲು ಮುಂದಾಗಿದೆ.

ವಾ ಸ್ಟ್ರೀಟ್, ಮಿಯಾಂದಾದ್ ಸ್ಟ್ರೀಟ್, ಆಂಬ್ರೋಸ್ ಸ್ಟ್ರೀಟ್, ಸೋಬರ್ಸ್ ಡ್ರೈವ್, ಕಾಲಿಸ್ ವೇ, ಹ್ಯಾಡ್ಲೀ ಸ್ಟ್ರೀಟ್ ಮತ್ತು ಅಕ್ರಮ್ ವೇನಂತಹ ಇತರ ಅಂತರ್‌ರಾಷ್ಟ್ರೀಯ ಕ್ರಿಕೆಟಿಗರ ಹೆಸರನ್ನು ಈ ಎಸ್ಟೇಟ್ ಹೆಸರಿಸಿದೆ.

ಮೆಲ್ಟನ್ ಕೌನ್ಸಿಲ್ ವ್ಯಾಪ್ತಿಯಲ್ಲಿ ಬರುವ ರಾಕ್‌ಬ್ಯಾಂಕ್ ಭಾರತೀಯ ಸಮುದಾಯದವರು ಹೆಚ್ಚಾಗಿ ನೆಲೆಸಿರುವ ಉಪನಗರವಾಗಿದೆ.

ಎಸ್ಟೇಟ್‌ನ ಡೆವಲಪರ್ ಎಲಿಸ್ಸಾ ಹೇಯ್ಸಾ ಅವರ ಪ್ರಕಾರ ಎಚ್.ಎಲ್. ಪ್ಯಾಕೇಜುಗಳನ್ನು ಪ್ರಾರಂಭಿಸಿದಾಗಿನಿಂದಲೂ ಭಾರತೀಯ ಸಮುದಾಯದ ಪ್ರತಿಕ್ರಿಯೆ ನಿರೀಕ್ಷಿಸಿರುವುದಕ್ಕಿಂತ ಉತ್ತಮವಾಗಿದೆ.

ಬೀದಿ ಹೆಸರುಗಳನ್ನು ಸಾಮಾನ್ಯವಾಗಿ ಅಭಿವರ್ಧಕರು ಸಲ್ಲಿಸುತ್ತಾರೆ ಮತ್ತು ಅವರು ಭೌಗೋಳಿಕ ಹೆಸರುಗಳ ಕಚೇರಿ ಮಾರ್ಗಸೂಚಿಗಳನ್ನು ಪೂರೈಸಿದರೆ ನಗರ ಸಭೆಯಿಂದ ಅನುಮೋದನೆ ದೊರೆಯುತ್ತದೆ. ಡಾನ್ ಬ್ರಾಡ್ಮನ್ ಹೆಸರಿನ ಸ್ಟ್ರೀಟ್ ಸೇರಿದಂತೆ 60 ಹೆಸರುಗಳನ್ನು ಕೌನ್ಸಿಲ್‌ಗೆ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ರೇಸಿ ವೆಂಚರ್ಸ್ ನಿರ್ದೇಶಕ ಖುರ್ರಾಮ್ ಸಯೀದ್ ಹೇಳಿದ್ದಾರೆ, ಆದರೆ ಮೆಲ್ಬೋರ್ನ್ ನಲ್ಲಿ ಈಗಾಗಲೇ ಅವರ ಹೆಸರಿನ ರಸ್ತೆ ಇರುವುದರಿಂದ ನಗರಸಭೆಯ ಕೌನ್ಸಿಲ್ ಅದನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News