ಏಶ್ಯ ಕಪ್: ಮಾತುಕತೆಗೆ ಬಿಸಿಸಿಐ ತೀವ್ರ ಆಕ್ಷೇಪ

Update: 2020-06-15 18:22 GMT

ಮುಂಬೈ, ಜೂ.15: ಈ ವರ್ಷ ಶ್ರೀಲಂಕಾ ಏಶ್ಯಕಪ್ ಟೂರ್ನಿಯ ಆತಿಥ್ಯ ವಹಿಸಲು ಆಸಕ್ತಿ ವಹಿಸಿದೆ ಎಂಬ ವರದಿಗಳ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಆಘಾತ ಮತ್ತು ಆಶ್ಚರ್ಯ ವ್ಯಕ್ತಪಡಿಸಿದೆ.

ಕಳೆದ ವಾರ ನಡೆದ ಏಶ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯ ನಂತರ, ಸದಸ್ಯರು ಟೆಲಿಕಾನ್ಫೆರೆನ್ಸ್ ಮೂಲಕ ಭೇಟಿಯಾದರೂ ಪಂದ್ಯಾವಳಿಯ ಮುಂದಿನ ಭವಿಷ್ಯದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ.

ಪರಿಸ್ಥಿತಿ ಹೀಗಿದ್ದರೂ ಎಸಿಸಿ ಸಭೆಯ ನಂತರ ಎಸ್‌ಎಲ್ಸಿ ಮುಖ್ಯಸ್ಥ ಶಮ್ಮಿ ಸಿಲ್ವಾ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ವರ್ಷದ ಏಶ್ಯಕಪ್ ಆವೃತ್ತಿಯನ್ನು ಆಯೋಜಿಸಲು ಶ್ರೀಲಂಕಾಕ್ಕೆ ಎಸಿಸಿ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. ಈ ವರದಿಯ ಬಗ್ಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News