ಕೋವಿಡ್ -19 ಸಂದರ್ಭದ ಮದುವೆ: ಪಿ.ಎಂ. ಕೇರ್ಸ್ ಗೆ ಐವತ್ತು ಸಾವಿರ ರೂ. ದೇಣಿಗೆ

Update: 2020-06-16 08:41 GMT

ಮಂಗಳೂರು, ಜೂ.16: ದೇಶದಲ್ಲಿ ಕೋವಿಡ್-19ರ ನಡುವೆ ಸರಕಾರದ ನಿಯಮಾನುಸಾರ ಸರಳವಾಗಿ ಶುಭ ಕಾರ್ಯಕ್ರಮ ಗಳು ನಡೆಯುತ್ತಿವೆ. ಈ ನಡುವೆ ಮದುವೆ ಖರ್ಚಿನಲ್ಲಿ ಒಂದು ಪಾಲನ್ನು ಕೊರೋನ ವಿರುದ್ಧ ಹೋರಾಟಕ್ಕೆ ದೇಣಿಗೆಯಾಗಿ ನೀಡುವ ವಿಶೇಷ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿವೆ. ಇಂತಹ ಒಂದು ಮದುವೆ ಇತ್ತೀಚೆಗೆ ನಗರದ ಬಾಳಂಭಟ್ ಸಭಾಂಗಣದಲ್ಲಿ ನಡೆಯಿತು.

ನಗರದ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀಕರ್ ಪ್ರಭು ಅವರ ಸಹೋದರಿಯ ಮಗಳ (ದಿವ್ಯಾ ಹಾಗೂ ರಾಕೇಶ್) ಮದುವೆ ಇತ್ತೀಚಿಗೆ ನಗರದ ಬಾಳಂಭಟ್ ಸಭಾಂಗಣದಲ್ಲಿ ಸರಳವಾಗಿ ನೆರವೇರಿತು.

ಕೊರೋನ ಸೋಂಕು ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಸುರಕ್ಷಿತ ಅಂತರ ಮೊದಲಾದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕೆಲವೇ ಮಂದಿ ಸಂಬಂಧಿಕರ ಸಮ್ಮುಖದಲ್ಲಿ ನಡೆದ ಈ ಮದುವೆಯ ಶುಭ ಸಂದರ್ಭದಲ್ಲಿ  ಶ್ರೀಕರ ಪ್ರಭು ಅವರು ಪ್ರಧಾನ ಮಂತ್ರಿಗಳ ಕೋವೀಡ್ ಪರಿಹಾರ ನಿಧಿ ( ಪಿ.ಎಂ. ಕೇರ್ಸ್) ಗೆ ರೂ. ಐವತ್ತು ಸಾವಿರವನ್ನು ದೇಣಿಗೆ ನೀಡುವ ಮೂಲಕ ತಮ್ಮ ಸೊಸೆಯ ಮದುವೆಯನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮೂವರು ಕೊರೋನ ಯೋಧರನ್ನು ಸನ್ಮಾನಿಸಿ, ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News