48,000 ರೂ.ಗಡಿ ದಾಟಿದ ಚಿನ್ನ

Update: 2020-06-16 15:52 GMT

 ಹೊಸದಿಲ್ಲಿ,ಜೂ.16: ಜಾಗತಿಕ ಬೆಲೆಗಳಲ್ಲಿ ಹೆಚ್ಚಳ ಮತ್ತು ರೂಪಾಯಿ ಅಪಮೌಲ್ಯದಿಂದಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಹಳದಿ ಲೋಹದ ಬೆಲೆ ಮಂಗಳವಾರ ಪ್ರತಿ ಹತ್ತು ಗ್ರಾಮ್‌ಗಳಿಗೆ 761 ರೂ.ಗಳಷ್ಟು ಏರಿಕೆಯಾಗಿ 48,414 ರೂ.ಗೆ ತಲುಪಿದೆ.

ಸೋಮವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಮ್‌ಗಳಿಗೆ 47,653 ರೂ.ಗಳಲ್ಲಿ ಅಂತ್ಯಗೊಂಡಿತ್ತು. ಮಂಗಳವಾರ ಡಾಲರ್‌ನೆದುರು ರೂಪಾಯಿ ವೌಲ್ಯವು 17 ಪೈಸೆ ಕುಸಿದು 76.20 ರಷ್ಟಾಗಿದೆ.

ಬೆಲೆ ಏರಿಕೆಯ ಪೈಪೋಟಿಯಲ್ಲಿ ಬೆಳ್ಳಿ ಕೂಡ ಹಿಂದೆ ಬಿದ್ದಿಲ್ಲ. ಮಂಗಳವಾರ ಅದು ಪ್ರತಿ ಕೆ.ಜಿ.ಗೆ 1,308 ರೂ.ಗಳಷ್ಟು ಏರಿಕೆಯಾಗಿ 49,204 ರೂ.ಗೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News