ಪ್ರತಿಮೆ ತೆರವುಗೊಳಿಸಲು ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡು: ಓರ್ವ ಗಂಭೀರ

Update: 2020-06-16 15:54 GMT

ಲಾಸ್ ಏಂಜಲಿಸ್ (ಅಮೆರಿಕ), ಜೂ. 16: ಅಮೆರಿಕದ ನ್ಯೂ ಮೆಕ್ಸಿಕೊ ರಾಜ್ಯದಲ್ಲಿ ಪ್ರತಿಭಟನಕಾರರಿಂದ ಪ್ರತಿಮೆಯೊಂದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಭಾರೀ ಶಸ್ತ್ರಸಜ್ಜಿತ ಗುಂಪೊಂದು ನಡೆಸಿದ ದಾಳಿಯಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಪೊಲೀಸರ ಕೈಯಲ್ಲಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಬಳಿಕ, ಜಗತ್ತಿನಾದ್ಯಂತ ವಸಾಹತುಶಾಹಿ ಮತ್ತು ಗುಲಾಮಗಿರಿಯನ್ನು ಬಿಂಬಿಸುವ ಸ್ಮಾರಕಗಳನ್ನು ಜನಾಂಗೀಯ ತಾರತಮ್ಯ ವಿರೋಧಿ ಪ್ರತಿಭಟನಕಾರರು ಉರುಳಿಸುತ್ತಿದ್ದಾರೆ.

ನ್ಯೂಮೆಕ್ಸಿಕೊ ರಾಜ್ಯದ 16ನೇ ಶತಮಾನದ ಗವರ್ನರ್ ಜುವಾನ್ ಡಿ ಓನೇಟ್‌ನ ಅಲ್ಬುಕರ್ಕ್ ನಗರದಲ್ಲಿರುವ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸುತ್ತಿದ್ದರು. ಆತ ಸ್ಪೇನ್‌ನಿಂದ ಬಂದು ಅಮೆರಿಕದಲ್ಲಿನ ಮೂಲ ನಿವಾಸಿಗಳನ್ನು ಸದೆಬಡಿದು ಗುಲಾಮರನ್ನಾಗಿ ಮಾಡಿಕೊಂಡಿದ್ದನು ಎಂದು ಇತಿಹಾಸ ಹೇಳುತ್ತದೆ.

ಸೋಮವಾರ ಅಧಿಕಾರಿಗಳು ಕಂಚಿನ ಪ್ರತಿಮೆಯನ್ನು ತೆರವುಗೊಳಿಸುತ್ತಿರುವಾಗ ಅಲ್ಲಿಗೆ ಬಂದ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದರು ಎಂದು ‘ಅಲ್ಬುಕರ್ಕ್ ಜರ್ನಲ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News