ನ್ಯೂಝಿಲ್ಯಾಂಡ್‌ನಲ್ಲಿ ಹೊಸದಾಗಿ 2 ಕೊರೋನ ಸೋಂಕು

Update: 2020-06-16 15:57 GMT

ವೆಲಿಂಗ್ಟನ್, ಜೂ. 16: ಎರಡು ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ನ್ಯೂಝಿಲ್ಯಾಂಡ್ ಮಂಗಳವಾರ ವರದಿ ಮಾಡಿದೆ. 24 ದಿನಗಳ ಕಾಲ ಯಾವುದೇ ಸೋಂಕು ಪ್ರಕರಣಗಳಿಲ್ಲದೆ ಕಳೆದ ದೇಶದ ಖಾತೆಗೆ ಈಗ ಮತ್ತೆರಡು ಪ್ರಕರಣಗಳು ಜಮೆಯಾಗಿವೆ.

ತನ್ನಲ್ಲಿ ಯಾವುದೇ ಹೊಸ ಅಥವಾ ಸಕ್ರಿಯ ಕೊರೋನ ವೈರಸ್ ಸೋಂಕು ಪ್ರಕರಣಗಳಿಲ್ಲ ಎಂಬುದಾಗಿ ನ್ಯೂಝಿಲ್ಯಾಂಡ್ ಕಳೆದ ವಾರ ಘೋಷಿಸಿತ್ತು ಹಾಗೂ ಗಡಿಯಲ್ಲಿನ ನಿಯಂತ್ರಣವನ್ನು ಹೊರತುಪಡಿಸಿ ಎಲ್ಲ ಸಾಮಾಜಿಕ ಹಾಗೂ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಿತ್ತು.

ಕೊರೋನ ವೈರಸ್ ಸಾಂಕ್ರಾಮಿಕ ಮುಕ್ತ ದಿನಗಳಿಗೆ ಮರಳಿದ ಮೊದಲ ದೇಶಗಳ ಪೈಕಿ ನ್ಯೂಝಿಲ್ಯಾಂಡ್ ಒಂದಾಗಿತ್ತು.

ಹೊಸದಾಗಿ ಸೋಂಕಿಗೆ ಒಳಗಾದವರು ಇಬ್ಬರು ಮಹಿಳೆಯರು. ಅವರಿಬ್ಬರೂ ಸಾವಿನಂಚಿನಲ್ಲಿರುವ ಹೆತ್ರವರನ್ನು ನೋಡುವುದಕ್ಕಾಗಿ ಜೂನ್ 7ರಂದು ಬ್ರಿಟನ್‌ನಿಂದ ನ್ಯೂಝಿಲ್ಯಾಂಡ್‌ಗೆ ಬಂದಿದ್ದರು ಎಂದು ಆರೋಗ್ಯ ಇಲಾಖೆಯ ಮಹಾನಿರ್ದೇಶಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News