×
Ad

ಟ್ವೆಂಟಿ-20 ವಿಶ್ವಕಪ್ ಮುಂದೂಡಲ್ಪಟ್ಟರೆ ನಿವೃತ್ತಿ ಸದ್ಯಕ್ಕಿಲ್ಲ: ಮುಹಮ್ಮದ್‌ಹಫೀಝ್

Update: 2020-06-16 23:22 IST

ಕರಾಚಿ, ಜೂ.16: ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಈ ವರ್ಷದ ಟ್ವೆಂಟಿ-20 ವಿಶ್ವಕಪ್‌ನ್ನು ಮುಂದೂಡಿದರೆ ತನ್ನ ನಿವೃತ್ತಿಯನ್ನೂ ಮುಂದೂಡುವುದಾಗಿ ಮಾಡುವುದಾಗಿ ಪಾಕಿಸ್ತಾನ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಹೇಳಿದ್ದಾರೆ.

    39ರ ಹರೆಯದ ಮಾಜಿ ನಾಯಕ ಹಫೀಝ್ ವಿಶ್ವಕಪ್ ಬಳಿಕ ತನ್ನ 17 ವರ್ಷಗಳ ಅಂತರ್‌ರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಲು ಯೋಜಿಸಿರುವುದಾಗಿ ಕಳೆದ ನವೆಂಬರ್‌ನಲ್ಲಿ ಹೇಳಿದ್ದರು. ಆದರೆ ಆತಿಥೇಯ ಆಸ್ಟ್ರೇಲಿಯ ವಿಶ್ವಕಪ್‌ನ್ನು ಈಗಿನ ಪರಿಸ್ಥಿತಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ನಿರ್ಧಾರದೊಂದಿಗೆ ಮುಂದೂಡುವ ಚಿಂತನೆ ನಡೆಸಿದ್ದು, ಇದರಿಂದಾಗಿ ಹಫೀಝ್‌ಗೆ ತನ್ನ ರಾಜೀನಾಮೆ ನಿರ್ಧಾರವನ್ನು ಪುನರ್‌ಪರಿಶೀಲಿಸುವಂತಾಗಿದೆ.

 ‘‘ನಾನು ವಿಶ್ವಕಪ್ ನಂತರ ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗುವೆನು ’’ಎಂದು ಹಫೀಝ್ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಹೇಳಿದರು.

   ‘‘ನಾನು ಪ್ರಮುಖ ಟೂರ್ನಮೆಂಟ್ ಆಡಿದ ನಂತರ ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಬಯಸುತ್ತೇನೆ, ಇದರಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಮತ್ತು ಆಶಾದಾಯಕವಾಗಿ ಗೆಲುವಿನ ಸ್ಮರಣೀಯ ನೆನಪಿನೊಂದಿಗೆ ಹೊರಬರುತ್ತೇನೆ’’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

   ‘‘ಇದು ನನ್ನ ಯೋಜನೆ ಮತ್ತು ವಿಶ್ವ ಟ್ವೆಂಟಿ-20ಯನ್ನು ನವೆಂಬರ್ ಅಥವಾ ಸ್ವಲ್ಪ ಸಮಯಗಳ ಕಾಲ ಮುಂದೂಡಿದರೆ, ನಾನು ಅದನ್ನು ಆಡುವುದಿಲ್ಲ ಎಂದಲ್ಲ ’’ ಎಂದು ಸ್ಪಷ್ಟಪಡಿಸಿದರು. ಹಫೀಝ್ 2018ರ ಕೊನೆಯಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ದೂರವಾಗಿದ್ದರು. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು ಮತ್ತು ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ 50 ಓವರ್‌ಗಳ ವಿಶ್ವಕಪ್ ಆಡಿದ್ದರು.

   ಜನವರಿಯಲ್ಲಿ ಬಾಂಗ್ಲಾದೇಶ ವಿರುದ್ಧದ ತವರು ಸರಣಿಯ ಟ್ವೆಂಟಿ -20 ತಂಡಕ್ಕೆ ಅವರನ್ನು ಕರೆಸಿಕೊಳ್ಳಲಾಯಿತು ಮತ್ತು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ನಿವೃತ್ತಿಗೆ ಸಂಬಂಧಿಸಿ ಹೆಚ್ಚಿನ ಕರೆಗಳು ತಮಗೆ ಬರುತ್ತಿದ್ದರೂ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಪ್ರದರ್ಶನ ಚೆನ್ನಾಗಿದೆ ಎಂದು ಹೇಳಿದರು.

‘‘ಯಾರು ಏನಾದರೂ ಹೇಳುತ್ತಾರೆಂದು ನಾನು ಕ್ರಿಕೆಟ್ ತ್ಯಜಿಸಲು ಹೋಗುವುದಿಲ್ಲ ನಾನು ಬೇರೊಬ್ಬರ ಆಜ್ಞೆಯ ಮೇರೆಗೆ ಆಟವಾಡಲು ಪ್ರಾರಂಭಿಸಲಿಲ್ಲ ’’ಎಂದು ಅವರು ಹೇಳಿದರು.

‘‘ನನ್ನ ಆಯ್ಕೆಯನ್ನು ಸಮರ್ಥಿಸಲು ಕಳೆದ 17 ವರ್ಷಗಳಿಂದ ಆಡುತ್ತಿದ್ದೇನೆ ಮತ್ತು ಈ ಬಾರಿ ನನ್ನ ಆಯ್ಕೆಯನ್ನು ಮತ್ತೆ ಸಮರ್ಥಿಸುತ್ತೇನೆ. ಎಲ್ಲ್ಲರಿಗೂ ನಾನು ಹೇಳುವುದಿಷ್ಟೇ ನನ್ನ ವೃತ್ತಿ, ನನ್ನ ಆಯ್ಕೆ’’ ಎಂದು ಖಾರವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News