2020ರಲ್ಲಿ 12 ಲಕ್ಷ ವಿದೇಶಿ ಕಾರ್ಮಿಕರು ಸೌದಿ ತೊರೆಯುವ ನಿರೀಕ್ಷೆ : ವರದಿ

Update: 2020-06-17 05:52 GMT

ರಿಯಾದ್ : ಸುಮಾರು 12 ಲಕ್ಷ ಮಂದಿ ವಿದೇಶಿ ಕಾರ್ಮಿಕರು ಈ ವರ್ಷ ಸೌದಿ ಅರೇಬಿಯಾ ತೊರೆಯುವ ನಿರೀಕ್ಷೆ ಇದೆ ಎಂದು ಜಡ್ವಾ ಇನ್ವೆಸ್ಟ್‌ಮೆಂಟ್ ಕಂಪನಿಯ ಇತ್ತೀಚಿನ ಅಂಕಿ ಅಂಶಗಳು ಅಂದಾಜಿಸಿವೆ.

ಆರೋಗ್ಯ ವಿಮೆ ದತ್ತಾಂಶಗಳ ಪ್ರಕಾರ, ಸೌದಿ ಅರೇಬಿಯಾದಲ್ಲಿ ಎ. 22ರಿಂದ ಜೂನ್ 3ರ ನಡುವೆ ಸುಮಾರು 3 ಲಕ್ಷ ಮಂದಿ ವಿದೇಶಿ ಉದ್ಯೋಗಿಗಳು ದೇಶ ತೊರೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದೇಶಿ ಉದ್ಯೋಗಿಗಳನ್ನು ತಮ್ಮ ತವರು ರಾಷ್ಟ್ರಕ್ಕೆ ಹೋಗಲು ಅನುವು ಮಾಡಿಕೊಡುವ ಔಧ್‌ಗಾಗಿ 1.78 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.

2019ರಲ್ಲಿ ಸೌದಿ ಕಾರ್ಮಿಕ ಮಾರುಕಟ್ಟೆಯಿಂದ ಸುಮಾರು 4.45 ಲಕ್ಷ ವಿದೇಶಿ ಕಾರ್ಮಿಕರು ನಿರ್ಗಮಿಸಿದ್ದಾರೆ. ಸಾರಿಗೆ, ಸಗಟು ಮತ್ತು ಚಿಲ್ಲರೆ ವ್ಯಾಪಾರ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಗೆ, ತೈಲ ಹೊರತುಪಡಿಸಿ ಇತರ ಉತ್ಪಾದನಾ ಘಟಕಗಳಿಗೆ, ಮನೋರಂಜನೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಆಡಳಿತ, ಬಳಕೆ, ಕೃಷಿ ಕ್ಷೇತ್ರ ಕೂಡಾ ಸವಾಲು ಎದುರಿಸುತ್ತಿವೆ ಎಂದು ವರದಿ ವಿವರಿಸಿದೆ.

ಸಂಭಾವ್ಯ ನಿರ್ಗಮನದ ಹೊರತಾಗಿಯೂ ವರ್ಷಾಂತ್ಯಕ್ಕೆ ನಿರುದ್ಯೋಗ ದರ 12% ಇರಲಿದೆ ಎಂದು ವರದಿ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News