×
Ad

ಅಮೆರಿಕದಲ್ಲಿ ಕೊರೋನಗೆ ಮೊದಲ ಮಹಾಯುದ್ಧಕ್ಕಿಂತ ಹೆಚ್ಚು ಬಲಿ

Update: 2020-06-17 21:54 IST

ವಾಶಿಂಗ್ಟನ್, ಜೂ. 17: ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಕಳೆದ 24 ಗಂಟೆಗಳಲ್ಲಿ 740 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಮೊದಲ ಜಾಗತಿಕ ಯುದ್ಧದಲ್ಲಿ ಮೃತಪಟ್ಟಿರುವುದಕ್ಕಿಂತ ಹೆಚ್ಚು ಅಮೆರಿಕನ್ನರು ಕೊರೋನ ವೈರಸ್‌ನಿಂದಾಗಿ ಮೃತಪಟ್ಟಂತಾಗಿದೆ.

ಈಗ ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಬಲಿಯಾಗಿರುವವರ ಒಟ್ಟು ಸಂಖ್ಯೆ 1,16,854ಕ್ಕೆ ಏರಿದೆ ಎಂದು ಬಾಲ್ಟಿಮೋರ್‌ನಲ್ಲಿರುವ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಕಲೆಹಾಕಿರುವ ಅಂಕಿಸಂಖ್ಯೆಗಳು ತಿಳಿಸಿವೆ.

ಸತತ ಎರಡು ದಿನ 24 ಗಂಟೆಗಳ ಅವಧಿಯ ಸಾವಿನ ಸಂಖ್ಯೆ 400ಕ್ಕಿಂತ ಕಡಿಮೆ ದಾಖಲಾದ ಬಳಿಕ, ಒಮ್ಮೆಲೇ ಈ ಹೆಚ್ಚಳ ವರದಿಯಾಗಿದೆ.

ಮೊದಲ ಮಹಾಯುದ್ಧದಲ್ಲಿ 1,16,516 ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದಾರೆ.

ದೇಶದಲ್ಲಿ ಸಾಂಕ್ರಾಮಿಕದ ಸೋಂಕಿಗೆ ಒಳಗಾಗಿರುವವರ ಸಂಖ್ಯೆ ಈಗ 21,34,973ಕ್ಕೆ ಏರಿದೆ. ಅಮೆರಿಕ ಜಗತ್ತಿನಲ್ಲೇ ಕೊರೋನ ವೈರಸ್‌ನ ಅತ್ಯಂತ ಭೀಕರ ದಾಳಿಗೆ ಗುರಿಯಾಗಿರುವ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News