×
Ad

ಚೀನಾ ಜತೆ ಸಂಘರ್ಷ: ರಕ್ಷಣಾ ಸಚಿವರಿಗೆ ರಾಹುಲ್ ಪಂಚಪ್ರಶ್ನೆ

Update: 2020-06-18 12:47 IST

ಹೊಸದಿಲ್ಲಿ : ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಜತೆಗಿನ ಸಂಘರ್ಷವನ್ನು ನಿಭಾಯಿಸಿದ ಕೇಂದ್ರ ಸರ್ಕಾರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ರಕ್ಷಣಾ ಸಚಿವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದಾರೆ.

20ಕ್ಕೂ ಹೆಚ್ಚು ಸೈನಿಕರ ಸಾವು ತೀರಾ ನೋವಿನ ಸಂಗತಿ ಎಂದು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್, ಟ್ವೀಟ್‌ನಲ್ಲಿ ಚೀನಾವನ್ನು ಹೆಸರಿಸದೇ ಭಾರತೀಯ ಸೈನಿಕರನ್ನು ಅವಮಾನಿಸಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಎರಡು ದೇಶಗಳ ಸೇನೆಗಳ ನಡುವೆ ಸಂಘರ್ಷ ಸಂಭವಿಸಿ, 1975ರ ಬಳಿಕ ಮೊದಲ ಬಾರಿಗೆ ಭಾರತೀಯ ಸೈನಿಕರು ಮೃತಪಟ್ಟು, ಎರಡು ದಿನಗಳ ಬಳಿಕ ಆ ಬಗ್ಗೆ ಟ್ವೀಟ್ ಮಾಡಿದ ಔಚಿತ್ಯವೇನು ಎಂದು ಕುಟುಕಿದ್ದಾರೆ.

ಅಷ್ಟೊಂದು ನೋವಿನ ವಿಚಾರವಾದರೆ ಚೀನಾವನ್ನು ಟ್ವೀಟ್‌ನಲ್ಲಿ ಹೆಸರಿಸದೇ ಭಾರತೀಯ ಸೇನೆಯನ್ನು ಅವಮಾನಿಸಿದ್ದೇಕೆ ? ಪ್ರತಿಕ್ರಿಯೆ ನೀಡಲು ಎರಡು ದಿನ ತೆಗೆದುಕೊಂಡಿದ್ದೇಕೆ ? ಸೈನಿಕರು ಹುತಾತ್ಮರಾಗುತ್ತಿದ್ದಾರೆ ಎಂದು ರ್ಯಾಲಿಗಳಲ್ಲಿ ಭಾಷಣ ಮಾಡಿದ್ದೇಕೆ ? ಅವಿತುಕೊಂಡು ಮಾಧ್ಯಮಗಳಲ್ಲಿ ಸೇನೆಯ ಮೇಲೆ ಗೂಬೆ ಕೂರಿಸುವಂತೆ ಮಾಡಿದ್ದೇಕೆ ? ಸರ್ಕಾರದ ಬದಲಾಗಿ ಸೇನೆಯ ಮೇಲೆ ಗೂಬೆ ಕೂರಿಸಿ ಪೆಯ್ಡಾ-ಮೀಡಿಯಾ ಆಪಾದಿಸಿದ್ದೇಕೆ ? ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಘಟನೆ ಬಗ್ಗೆ ಮೋದಿ ಮೌನವಾಗಿದ್ದಾರೆ ಎಂದು ಈ ಬಗ್ಗೆಯೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News