ಭಾರತದ ಭೂಭಾಗಗಳಿರುವ ಭೂಪಟಕ್ಕೆ ಒಪ್ಪಿಗೆ ನೀಡುವ ಮಸೂದೆಗೆ ನೇಪಾಳ ಸಂಸತ್ತು ಅಂಗೀಕಾರ

Update: 2020-06-18 08:54 GMT

ಕಾಠ್ಮಂಡು: ಭಾರತದ ಪ್ರಾಂತ್ಯಗಳನ್ನೂ ತನ್ನದೆಂದು ಸೇರಿಸಿಕೊಂಡು ನೇಪಾಳ ಸಿದ್ಧಪಡಿಸಿರುವ ಹೊಸ ಭೂಪಟವನ್ನು ಅಂಗೀಕರಿಸುವ ನಿಟ್ಟಿನಲ್ಲಿ ನೇಪಾಳದ ನ್ಯಾಷನಲ್ ಅಸೆಂಬ್ಲಿ ಇಂದು ಸರ್ವಾನುಮತದಿಂದ ತನ್ನ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ.

ನೇಪಾಳದ ಹೊಸ ರಾಜಕೀಯ ಭೂಪಟವನ್ನು ಅಲ್ಲಿನ ಸಂಸತ್ತಿನ  ಕೆಳಮನೆ ಕಳೆದ ಶನಿವಾರ ಅಂಗೀಕರಿಸಿದಾಗ ಭಾರತ ಅದಕ್ಕೆ ಬಲವಾಗಿ ಆಕ್ಷೇಪ ಸೂಚಿಸಿತ್ತು ಹಾಗೂ ಇದು ಅಸ್ವೀಕಾರಾರ್ಹ ಎಂದು ಹೇಳಿತ್ತು.

ಇಂದು ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿರುವುದರಿಂದ ತಿದ್ದುಪಡಿಗೊಂಡ ಭೂಪಟವು ನೇಪಾಳದ ರಾಷ್ಟ್ರೀಯ ಲಾಂಛನದಲ್ಲಿ ಕಾಣಿಸಲಿದೆ. ಸದನದ ಎಲ್ಲಾ 57 ಸದಸ್ಯರು ತಿದ್ದುಪಡಿ ಪರ ಮತ ನೀಡಿದ್ದಾರೆ.

ಮೇ 8ರಂದು ಲಿಪುಲೇಖ್ ಪಾಸ್ ಹಾಗೂ ಉತ್ತರಾಖಂಡದ ಧರ್ಚುಲ ಸಂಪರ್ಕಿಸುವ  ಮಹತ್ವದ 80 ಕಿ.ಮೀ. ಉದ್ದದ ರಸ್ತೆಯನ್ನು ರಕ್ಷಣಾ  ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದಂದಿನಿಂದ ಎರಡೂ ದೇಶಗಳ ನಡುವಿನ ಸಂಬಂಧ ಹಳಸಿದೆ. ಈ ರಸ್ತೆ ತನ್ನ ವ್ಯಾಪ್ತಿ ಮೂಲಕ ಸಾಗುತ್ತದೆ ಎಂದು ಆರೋಪಿಸಿದ ನೇಪಾಳ ಕೆಲವೇ ದಿನಗಳಲ್ಲಿ ಲಿಪುಲೇಖ್, ಕಾಲಾಪಾನಿ ಹಾಗೂ ಲಿಂಪಿಯಧುರ ಪ್ರದೇಶಗಳನ್ನು ತನ್ನದೆಂದು ಹೇಳಿ ಹೊಸ ಭೂಪಟ ಸಿದ್ಧಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News