×
Ad

ತನ್ನ ಬಾಸ್ಮತಿ ಅಕ್ಕಿಗೆ ಜಿಐ ಟ್ಯಾಗ್ ಕೋರಿ ಸುಪ್ರೀಂ ಮೆಟ್ಟಿಲೇರಿದ ಮಧ್ಯಪ್ರದೇಶ

Update: 2020-06-19 23:15 IST

ಭೋಪಾಲ,ಜೂ.19: ಬಾಸ್ಮತಿ ಅಕ್ಕಿಯನ್ನು ಬೆಳೆಯುವ ಪ್ರದೇಶಗಳಿಗೆ ಭೌಗೋಳಿಕ ಸೂಚಕ (ಜಿಐ) ಮಾನ್ಯತೆಯನ್ನು ನೀಡಬೇಕೆಂಬ ರಾಜ್ಯದ ಬೇಡಿಕೆಯ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ.

 ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿಯು ಜಿಐ ಟ್ಯಾಗ್‌ಗಳಿಗಾಗಿ ಸಲ್ಲಿಸಿದ್ದ ನಕಾಶೆಯಲ್ಲಿ ರಾಜ್ಯದ 13 ಜಿಲ್ಲೆಗಳನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ರಾಜ್ಯ ಸರಕಾರ ಮತ್ತು ಬಾಸ್ಮತಿ ಬೆಳೆಗಾರರ ಸಂಘ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದವು.

ಈ ವರ್ಷದ ಆರಂಭದಲ್ಲಿ ಅವುಗಳಿಗೆ ವಿರುದ್ಧವಾಗಿ ತೀರ್ಪು ಹೊರಬಿದ್ದಿತ್ತು. ‘ನಾವು ಸಾಂಪ್ರದಾಯಿಕವಾಗಿ ಉನ್ನತ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಬೆಳೆಯುತ್ತಿದ್ದೇವೆ. ಜಿಐ ಟ್ಯಾಗ್‌ನ ಕೊರತೆಯಿಂದಾಗಿ ನಮ್ಮ ರೈತರಿಗೆ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ’ಎಂದು ಮಧ್ಯಪ್ರದೇಶ ಕೃಷಿಸಚಿವ ಕಮಲ್ ಪಟೇಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News