×
Ad

ದೇಶದಲ್ಲಿ 4 ಲಕ್ಷ ದಾಟಿದ ಕೊರೋನ ಪ್ರಕರಣಗಳ ಸಂಖ್ಯೆ

Update: 2020-06-20 21:37 IST

ಹೊಸದಿಲ್ಲಿ: ಶನಿವಾರ ಒಂದೇ ದಿನದಲ್ಲಿ 14,000 ಕೊರೋನ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ.

ಸದ್ಯ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 4,00,412 ಕ್ಕೇರಿದೆ. ಮೃತರ ಸಂಖ್ಯೆ 13 ಸಾವಿರ ಸಮೀಪಿಸುತ್ತಿದೆ. ವಿಶ್ವಾದ್ಯಂತ ಅತಿ ಹೆಚ್ಚು ಕೊರೋನ ಪೀಡಿತರು ಇರುವ ದೇಶಗಳಲ್ಲಿ ಭಾರತ 4ನೆ ಸ್ಥಾನದಲ್ಲಿದೆ. ಭಾರತಕ್ಕೂ ಮೊದಲು ರಷ್ಯಾ, ಬ್ರೆಝಿಲ್ ಮತ್ತು ಅಮೆರಿಕ ಇದೆ.

ಇಂದು ಸಂಜೆ ಸುಮಾರು 5,000 ಪ್ರಕರಣಗಳು ದೃಢಪಟ್ಟಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News