ಸಿಕ್ಕಿಂನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಹೊಡೆದಾಟ: ವಿಡಿಯೋ ವೈರಲ್
ಹೊಸದಿಲ್ಲಿ: ಲಡಾಖ್ ನಲ್ಲಿ ಇತ್ತೀಚೆಗಷ್ಟೇ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ಕೆಲ ದಿನಗಳಲ್ಲೇ ಸಿಕ್ಕಿಂನಲ್ಲಿ ನಡೆದದ್ದು ಎನ್ನಲಾದ ಭಾರತ-ಚೀನಾದ ಸೈನಿಕರ ನಡುವಿನ ಹೊಡೆದಾಟದ ವಿಡಿಯೋ ವೈರಲ್ ಆಗುತ್ತಿದೆ.
ಎರಡೂ ಕಡೆಯ ಸೈನಿಕರು ಹೊಡೆದಾಟ ನಡೆಸುತ್ತಿರುವುದು, ಭಾರತೀಯ ಯೋಧರೊಬ್ಬರು ಚೀನಾದ ಅಧಿಕಾರಿಗೆ ಮುಷ್ಟಿಯಿಂದ ಹೊಡೆಯುವುದು ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣಿಸುತ್ತದೆ.
‘ಹಿಂದಕ್ಕೆ ಹೋಗಿ’, ‘ಗಲಾಟೆ ಮಾಡಬೇಡಿ’ ಎಂದು ಎರಡೂ ಕಡೆಯಿಂದ ಹೇಳುತ್ತಿರುವುದು ಕೇಳಿಸುತ್ತದೆ. ಕೆಲ ಹೊತ್ತಿನ ನಂತರ ಹೊಡೆದಾಟ ಹತೋಟಿಗೆ ಬರುತ್ತದೆ.
ಇದು ಯಾವಾಗ ನಡೆದ ಘಟನೆ ಎನ್ನುವುದು ಸ್ಪಷ್ಟವಾಗಿಲ್ಲವಾದರೂ, ಭಾರತ-ಚೀನಾಗಳ ನಡುವೆ ಮಿಲಿಟರಿ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ವೈರಲ್ ಆಗಿದೆ ಎಂದು ndtv.com ವರದಿ ಮಾಡಿದೆ.
Meanwhile, a India China Face Off video "emerged" today on the internet. Possibly from north sikkim, with no specific date. No one has verified the video but it for sure Indian and Chinese having a bit of tiff. pic.twitter.com/BVUPRDeNvv
— Sidhant Sibal (@sidhant) June 22, 2020