ನೊವಾಕ್ ಜೊಕೊವಿಕ್‌ಗೆ ಕೊರೋನ ಸೋಂಕು
Update: 2020-06-23 18:48 IST
ಪ್ಯಾರಿಸ್, ಜೂ.23: ಕೊರೋನ ವೈರಸ್ ಪರೀಕ್ಷೆಯ ಫಲಿತಾಂಶದಲ್ಲಿ ನನಗೆ ಪಾಸಿಟಿವ್ ವರದಿ ಬಂದಿದೆ ಎಂದು ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.
ಕೋವಿಡ್-19 ಪರೀಕ್ಷೆಯಲ್ಲಿ ನೊವಾಕ್ ಜೊಕೊವಿಕ್ ಕುರಿತ ವರದಿಯು ಪಾಸಿಟಿವ್‌ಆಗಿತ್ತು. ಅವರಿಗೆ ಯಾವುದೇ ರೋಗ ಲಕ್ಷಣ ಇರಲಿಲ್ಲ ಎಂದು ಜೊಕೊವಿಕ್ ಸಿಬ್ಬಂದಿ ಪ್ರಕಟನೆಯೊಂದರಲ್ಲಿ ತಿಳಿಸಿದರು.
ಬಾಲ್ಕನ್ಸ್‌ನ ಪ್ರದರ್ಶನ ಟೆನಿಸ್ ಪಂದ್ಯದಲ್ಲಿ ಭಾಗವಹಿಸಿದ್ದ ಆಟಗಾರರ ಪೈಕಿ ಸೋಂಕು ತಗಲಿದ ನಾಲ್ಕನೇ ಆಟಗಾರ ಜೊಕೊವಿಕ್. ಈ ಮೊದಲು ಗ್ರಿಗೊರ್ ಡಿಮಿಟ್ರೊವ್, ಬೊರ್ನ ಕೊರ್ನಿಕ್ ಹಾಗೂ ವಿಕ್ಟರ್ ಟ್ರೊಸ್ಕಿಗೆ ಕೊರೋನ ವೈರಸ್ ತಗಲಿತ್ತು.
ಕಳೆದ ವಾರ ಬೆಲ್‌ಗ್ರೆಡ್‌ನಲ್ಲಿ ಟ್ರೋಸ್ಕಿ ಅವರು ಜೊಕೊವಿಕ್ ವಿರುದ್ಧ ಸೆಣಸಾಡಿದ್ದರು