×
Ad

ಮತ್ತೆ ಏಳು ಪಾಕಿಸ್ತಾನದ ಕ್ರಿಕೆಟಿಗರಿಗೆ ಕೋವಿಡ್-19 ಸೋಂಕು ದೃಢ

Update: 2020-06-23 19:33 IST
ವಹಾಬ್ ರಿಯಾಝ್, ಮುಹಮ್ಮದ್ ಹಫೀಝ್   

 ಕರಾಚಿ, ಜೂ.23: ಜೂನ್ 28 ರಂದು ಕ್ರಿಕೆಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ ಕೈಗೊಳ್ಳಲು ಸಜ್ಜಾಗುತ್ತಿರುವ ಪಾಕಿಸ್ತಾನದ ಇನ್ನೂ 7 ಆಟಗಾರರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಮಂಗಳವಾರ ದೃಢಪಡಿಸಿದೆ.

ಸೋಂಕಿಗೆ ತುತ್ತಾಗಿರುವ ಏಳು ಕ್ರಿಕೆಟಿಗರೆಂದರೆ: ಕಾಶಿಫ್ ಭಟ್ಟಿ, ಮುಹಮ್ಮದ್ ಹಸನೈನ್, ಫಖರ್ ಝಮಾನ್,ಮುಹಮ್ಮದ್ ರಿಝ್ವಿನ್,ಮುಹಮ್ಮದ್ ಹಫೀಝ್, ವಹಾಬ್ ರಿಯಾಝ್ ಹಾಗೂ ಇಮ್ರಾನ್ ಖಾನ್.

ಆಗಸ್ಟ್‌ನಲ್ಲಿ ನಿಗದಿಯಾಗಿರುವ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ 29 ಆಟಗಾರರ ಜೊತೆಗೆ ಇವರೆಲ್ಲರಿಗೂ ಕೋವಿಡ್-19 ಟೆಸ್ಟ್ ನಡೆಸಲಾಗಿತ್ತು. ಇದೀಗ ಪಾಕ್‌ನ ಒಟ್ಟು 10 ಮಂದಿ ಆಟಗಾರರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಕಾರಣ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು ಅನುಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News