ಲಾರಿಗಳ ಬ್ಯಾಟರಿ ಕಳವು

Update: 2020-06-25 16:36 GMT

 ಬೈಂದೂರು, ಜೂ.25: ನಾಗೂರಿನಲ್ಲಿರುವ ನೂರಿ ಸೀ ಪುಡ್‌ನ ಆವರಣದ ಹೊರಗಡೆ ನಿಲ್ಲಿಸಿದ ಮೂರು ಲಾರಿಗಳ ಬ್ಯಾಟರಿ ಕಳವಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗೂರಿನ ಕೆ.ಅಬ್ದುಲ್ ಎಂಬವರ ವ್ಯವಹಾರಕ್ಕೆ ಸಂಬಂಧಿಸಿದ ಮೂರು ಲಾರಿಗಳಿಗೆ ಅಳವಡಿಸಿದ ತಲಾ ಎರಡು ಬ್ಯಾಟರಿಗಳಂತೆ ಒಟ್ಟು ಆರು ಬ್ಯಾಟರಿಗಳನ್ನು ಜೂ.23ರಂದು ರಾತ್ರಿ ವೇಳೆ ಕಳ್ಳರು ಕಳವು ಮಾಡಿದ್ದಾರೆನ್ನ ಲಾಗಿದೆ. ಇವುಗಳ ಒಟ್ಟು ಮೌಲ್ಯ 45,000ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News