ಕಾಶ್ಮೀರಿಗಳ ಹಕ್ಕುಗಳನ್ನು ಮರುಸ್ಥಾಪಿಸಬೇಕು; ಎನ್ಆರ್ ಸಿ, ಸಿಎಎ ಭಾರತಕ್ಕೆ ಸೂಕ್ತವಲ್ಲ

Update: 2020-06-26 06:17 GMT

ವಾಷಿಂಗ್ಟನ್: ಎಲ್ಲಾ ಕಾಶ್ಮೀರಿಗಳ ಹಕ್ಕುಗಳನ್ನು ಅವರಿಗೆ ವಾಪಸ್ ನೀಡಬೇಕು ಎಂದು ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆಯ ಜಾರಿ ಹಾಗೂ ಅಸ್ಸಾಂನಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ  ಪೌರತ್ವ ನೋಂದಣಿಗೂ  (ಎನ್ಆರ್ ಸಿ) ಅವರು  ಆಕ್ಷೇಪ ಸೂಚಿಸಿದ್ದಾರೆ.

“ಜಾತ್ಯತೀತತೆಯ ಸುದೀರ್ಘ ಇತಿಹಾಸ ಹೊಂದಿರುವ ಹಾಗೂ  ಹಲವಾರು ಜಾತಿ ಪಂಗಡಗಳು ಸಾಮರಸ್ಯದಿಂದಿರುವ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಇಂತಹ ಕ್ರಮಗಳು ಸರಿಯಲ್ಲ'' ಎನ್ನುವುದು ಪ್ರಚಾರ ವೆಬ್ ತಾಣದಲ್ಲಿ  ಪೋಸ್ಟ್ ಮಾಡಲಾಗಿರುವ ಜೋ ಬೈಡನ್ ಅವರ 'ಮುಸ್ಲಿಂ ಅಮೆರಿಕನ್ ಸಮುದಾಯದ' ಕುರಿತಾದ  ಅಜೆಂಡಾ ಆಗಿದೆ.

“ಕಾಶ್ಮೀರದಲ್ಲಿ ಭಾರತ ಸರಕಾರ ಅಲ್ಲಿನ ಜನರ ಎಲ್ಲಾ ಹಕ್ಕುಗಳನ್ನು ಮರುಸ್ಥಾಪಿಸಬೇಕು. ಶಾಂತಿಯುತ ಪ್ರತಿಭಟನೆಗಳನ್ನು ತಡೆಯುವುದು, ಅಂತರ್ಜಾಲ ಸೇವೆ ಸ್ಥಗಿತಗೊಳಿಸುವುದು ಮುಂತಾದ ಕ್ರಮಗಳು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ'' ಎಂದು ಬೈಡನ್ ಅವರ  ಪಾಲಿಸಿ ಅಜೆಂಡಾದಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News