ನೆರವಿಗಾಗಿ ನಿಧಿ ಸಂಗ್ರಹಿಸಿದ ಶರತ್, ಸತ್ಯನ್

Update: 2020-06-28 05:28 GMT

ಹೊಸದಿಲ್ಲಿ, ಜೂ.27: ಟೇಬಲ್ ಟೆನಿಸ್ ಸಮುದಾಯದ ಕನಿಷ್ಠ 100 ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಭಾರತದ ಪ್ರಮುಖ ಟಿಟಿ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಸುಮಾರು 7 ಲಕ್ಷ ರೂ.ಗೂ ಅಧಿಕ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ.

ಮಾಜಿ ಆಟಗಾರ್ತಿ ನೇಹಾ ಅಗರ್ವಾಲ್ ಅವರು ಶರತ್ ಹಾಗೂ ಸತ್ಯನ್ ನಿಧಿ ಸಂಗ್ರಹ ಅಭಿಯಾನದೊಂದಿಗೆ ಕೈಜೋಡಿಸಿದ್ದಾರೆ. ಈ ಮೂವರು ನಾಲ್ಕು ದಿನಗಳಲ್ಲಿ ಈಗಾಗಲೇ 7 ಲಕ್ಷ ರೂ. ಸಂಗ್ರಹಿಸಿದ್ದಾರೆ. ಕೊರೋನ ವೈರಸ್‌ನಿಂದ ಸಂಕಷ್ಟದಲ್ಲಿರುವ ಆಟಗಾರರು, ಕೋಚ್‌ಗಳು ಹಾಗೂ ಅಂಪೈರ್‌ಗಳಿಗೆ ಆರ್ಥಿಕ ನೆರವು ನೀಡಲು ಈ ನಿಧಿಯನ್ನು ಬಳಸಲಾಗುತ್ತದೆ.

‘‘ತನ್ನ ಸಹ ಆಟಗಾರರ ಕೋಚ್‌ಗಳ ಪರಿಸ್ಥಿತಿಯನ್ನು ಆಲಿಸಿದ ಬಳಿಕ ಸತ್ಯನ್‌ಗೆ ಈ ಯೋಚನೆ ಬಂತು. ಈಗಿನ ಪರಿಸ್ಥಿತಿಯಲ್ಲಿ ಕೋಚ್‌ಗಳಿಗೆ ಕೆಲಸವಿಲ್ಲ. ಹೀಗಾಗಿ ನಾವು ಮಾಡಬಹುದಾದ ಕನಿಷ್ಠ ಕಾಳಜಿ ಇದಾಗಿದೆ ಎಂದು ಸತ್ಯನ್ ಭಾವಿಸಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ನಾವು ನಮ್ಮ ಗುರಿಯನ್ನು ಪರಿಷ್ಕರಿಸಿ 100 ಜನರಿಗೆ ನೆರವಾಗಲು ನಿರ್ಧರಿಸಿದ್ದೆವು. ಒಂದೆರಡು ದಿನಗಳಲ್ಲಿ 10 ಲಕ್ಷ ರೂ. ನಿಧಿ ಸಂಗ್ರಹಿಸುವ ವಿಶ್ವಾಸ ನಮಗಿದೆ’’ಎಂದು ವಿಶ್ವದ ನಂ.31ನೇ ಆಟಗಾರ ಶರತ್ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News