ಲಡಾಖ್‌ನಲ್ಲಿ ನಮ್ಮ ವೀರ ಯೋಧರು ಚೀನಾಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ: ಪ್ರಧಾನಿ ಮೋದಿ

Update: 2020-06-28 06:32 GMT

 ಹೊಸದಿಲ್ಲಿ,ಜೂ.28: "ಲಡಾಖ್‌ನಲ್ಲಿ ನಮ್ಮ ಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದವರಿಗೆ ನಮ್ಮವೀರ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ದೇಶಕ್ಕೆ ಯಾವುದೇ ತೊಂದರೆಯಾಗಲು ನಾವು ಬಿಡುವುದಿಲ್ಲ ಎಂದು ಸೈನಿಕರು ಸಾಬೀತುಪಡಿಸಿದ್ದಾರೆ. ಗಡಿ ರಕ್ಷಣೆ ವಿಚಾರದಲ್ಲಿ ಸೈನಿಕರ ಶಕ್ತಿಯನ್ನು ನೋಡಿದ್ದೇವೆ. ಪ್ರತಿಯೊಬ್ಬ ನಾಗರಿಕರು ಗಡಿಯಲ್ಲಿ ಸೈನಿಕರ ನಷ್ಟವನ್ನು ಅನುಭವಿಸಿರಬಹುದು. ಹುತಾತ್ಮರಾದವರ ಪೋಷಕರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಈಗಲೂ ಸಿದ್ಧವಾಗಿರುವುದು ನಮ್ಮ ಶಕ್ತಿಯಾಗಿದೆ'' ಎಂದು ತಿಂಗಳ ರೇಡಿಯೊ ಕಾರ್ಯಕ್ರಮ "ಮನ್‌ ಕಿ ಬಾತ್‌'ನಲ್ಲಿ ಲಡಾಖ್ ಬಿಕ್ಕಟ್ಟಿನ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ.

"ಲಾಕ್‌ಡೌನ್ ಬಳಿಕ ಅನ್‌ಲಾಕ್‌ನತ್ತ ನಾವು ಸಾಗುತ್ತಿದ್ದು, ಅನ್‌ಲಾಕ್ ಸಮಯದಲ್ಲಿ ಕೊರೋನವನ್ನು ಮಣಿಸುವ ಜೊತೆಗೆ ದೇಶದ ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾಗಿದೆ. ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ತಪ್ಪದೆ ಅನುಸರಿಸಬೇಕು. ಈ ಎಲ್ಲ ನಿಯಮ ಉಲ್ಲಂಘಿಸಿ ನಿಮ್ಮಿಂದಿಗೆ ಉಳಿದವರನ್ನು ಸಮಸ್ಯೆಗೆ ಸಿಲುಕಿಸಬೇಡಿ. ನಮ್ಮ ಸರಕಾರ ಐತಿಹಾಸಿಕ ನಿರ್ಣಯದೊಂದಿಗೆ ಹೊಸ ದಿಕ್ಕಿನತ್ತ ಸಾಗುತ್ತಿದೆ. ರೈತರು ತಮ್ಮಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಕಲ್ಲಿದ್ದಲು ಗಣಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಕಲ್ಲಿದ್ದಲು ಗಣಿಗಿದ್ದ ಲಾಕ್‌ಡೌನ್‌ನ್ನು ತೆಗೆದು ಹಾಕಿದ್ದೇವೆ. ಕೊರೋನ ಸಂಕಷ್ಟದ ನಡುವೆ ಆರ್ಥಿಕತೆಯೂ ಮುಖ್ಯ'' ಎಂದು ಪ್ರಧಾನಿ ಹೇಳಿದ್ದಾರೆ.

"ನಾವು ಇಂದು ದೇಶದ ಮಗ, ನಮ್ಮ ಮಾಜಿ ಪ್ರಧಾನಿ ನರಸಿಂಹರಾವ್‌ರನ್ನು ನೆನೆಯಬೇಕಾಗಿದೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸಿದ್ದರು. ಅವರೊಬ್ಬ ಶ್ರೇಷ್ಠ ನಾಯಕ ಹಾಗೂ ವಿದ್ವಾಂಸರಾಗಿದ್ದರು. ತೀರಾ ಬಡ ಕುಟುಂಬದಿಂದ ಬಂದಿರುವ ರಾವ್ ಎಳೆಯ ವಯಸ್ಸಿನಲ್ಲಿಯೇ ಅನ್ಯಾಯದ ವಿರುದ್ಧ ಹೋರಾಡಿದ್ದರು. ನಮ ್ಮಮಾಜಿ ಪ್ರಧಾನಿಯ ಬಗ್ಗೆ ಹೆಚ್ಚಿನ ಭಾರತೀಯರು ಓದಿ ತಿಳಿದುಕೊಳ್ಳಲಿದ್ದಾರೆಂಬ ವಿಶ್ವಾಸ ನನಗಿದೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News