ಬಿಹಾರದ ಸಚಿವ ಮತ್ತು ಪತ್ನಿಗೆ ಕೊರೋನ ವೈರಸ್ ಸೋಂಕು

Update: 2020-06-28 14:51 GMT

ಕಟಿಹಾರ್,ಜೂ.28: ಬಿಹಾರದ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ವಿನೋದ್ ಕುಮಾರ್ ಸಿಂಗ್ ಅವರ ಪತ್ನಿ ರವಿವಾರ ಕೋವಿಡ್-19ಗೆ ಪಾಸಿಟಿವ್ ಆಗಿದ್ದು, ಅವರನ್ನು ಇಲ್ಲಿಯ ಹೋಟೆಲ್ಲೊಂದರ ಐಸೊಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದೆ.

ಪ್ರಾಣಪುರದ ಬಿಜೆಪಿ ಶಾಸಕರಾಗಿರುವ ಸಿಂಗ್ ಪಟ್ನಾದಲ್ಲಿ ಕೊರೋನ ವೈರಸ್ ಪರೀಕ್ಷೆಗೊಳಗಾಗಿದ್ದು,ರವಿವಾರ ಕಟಿಹಾರ್‌ಗೆ ಮರಳಿದ್ದರು.

ಸಚಿವರ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪರೀಕ್ಷೆಗಾಗಿ ಅವರ ಗಂಟಲು ದ್ರವವನ್ನು ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಂವಲ್ ತನುಜ ತಿಳಿಸಿದರು.

ಇದು ನಿತೀಶ ಕುಮಾರ ಸರಕಾರದ ಸಚಿವರೋರ್ವರು ಕೊರೋನ ವೈರಸ್ ಸೋಂಕಿಗೆ ತುತ್ತಾದ ಮೊದಲ ಪ್ರಕರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News