ಚೀನೀಯರ ಟೆಂಟ್‍ ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಗಲ್ವಾನ್ ಸಂಘರ್ಷ: ಕೇಂದ್ರ ಸಚಿವ ವಿ.ಕೆ. ಸಿಂಗ್

Update: 2020-06-29 10:36 GMT

ಹೊಸದಿಲ್ಲಿ: ಚೀನೀಯರು ಹಾಕಿದ್ದ ಟೆಂಟ್ ಒಂದರಲ್ಲಿ ಕಾಣಿಸಿಕೊಂಡ ನಿಗೂಢ ಬೆಂಕಿ ಇತ್ತೀಚೆಗೆ ಲಡಾಖ್‍ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನೀ ಸೈನಿಕರ ನಡುವಿನ ಭೀಕರ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಕೇಂದ್ರ ಸಚಿವ ವಿ ಕೆ ಸಿಂಗ್ ಹೇಳಿಕೊಂಡಿದ್ದಾರೆ. ಈ ಸಂಘರ್ಷದಲ್ಲಿ ಚೀನಾದ 40ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದೂ ಸಿಂಗ್ ಹೇಳಿದ್ದಾರೆ.

ಎಬಿಪಿ ನ್ಯೂಸ್ ಜತೆ ಮಾತನಾಡಿದ ನಿವೃತ್ತ ಸೇನಾ ಮುಖ್ಯಸ್ಥರೂ ಆಗಿರುವ ಸಿಂಗ್,  ಜೂನ್ 15ರಂದು ನಡೆದ ಹಿಂಸಾತ್ಮಕ ಸಂಘರ್ಷಕ್ಕೆ ಚೀನೀಯರ ಟೆಂಟ್‍ ನಲ್ಲಿ ಕಾಣಿಸಿಕೊಂಡ ಬೆಂಕಿಯೇ ಕಾರಣ ಎಂದಿದ್ದಾರೆ.

“ವಾಸ್ತವಿಕ ನಿಯಂತ್ರಣ ರೇಖೆ ಸಮೀಪ ಸೈನಿಕರಿರಬಾರದು ಎಂದು ಕಾರ್ಪ್ ಕಮಾಂಡರ್ ಮಟ್ಟದ ಮಾತುಕತೆಗಳಲ್ಲಿ ನಿರ್ಧರಿಸಲಾಗಿತ್ತು. ಘಟನೆ ನಡೆದ ದಿನ ಭಾರತೀಯ ಸೈನಿಕರು ಗಡಿಯಲ್ಲಿ ಭಾರತದ ಭೂಭಾಗದ ಪಕ್ಕ ಬಂದಾಗ ಚೀನೀಯರು ಅಲ್ಲಿ ಇನ್ನೂ ಇರುವುದು ಹಾಗೂ ಟೆಂಟ್ ಹಾಕಿರುವುದು ಕಂಡು ಬಂದಿತ್ತು. ಆಗ ನಮ್ಮ ಕಮಾಂಡಿಂಗ್ ಆಫೀಸರ್ ಅತ್ತ ಕಡೆ ಹೋಗಿ ಟೆಂಟ್ ತೆಗೆಯುವಂತೆ ಹೇಳಿದ್ದರು. ಅವರು ಟೆಂಟ್ ತೆಗೆಯುತ್ತಿರುವಾಗ ದಿಢೀರ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು, ನಂತರ ಎರಡೂ ಕಡೆಗಳ ಸೈನಿಕರು ಸಂಘರ್ಷಕ್ಕಿಳಿದಿದ್ದರು'' ಎಂದು ನಿವೃತ್ತ ಜನರಲ್  ವಿ ಕೆ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News