ಮಾಸಿಕ 50 ಲಕ್ಷ ಪಿಪಿಇ ಕಿಟ್ ರಫ್ತಿಗೆ ಅವಕಾಶ

Update: 2020-06-29 13:56 GMT

ಹೊಸದಿಲ್ಲಿ, ಜೂ.29: ಪ್ರತೀ ತಿಂಗಳೂ 50 ಲಕ್ಷ ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ)ಗಳನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದು, ಸರಕಾರದ ಈ ಕ್ರಮದಿಂದ ‘ಮೇಕ್ ಇನ್ ಇಂಡಿಯಾ ’ದ ರಫ್ತಿಗೆ ಉತ್ತೇಜನ ದೊರಕಲಿದೆ ಎಂದಿದ್ದಾರೆ.

ಸೋಂಕಿತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿರುವ ಮುಂಚೂಣಿ ಕಾರ್ಯಕರ್ತರ ಸುರಕ್ಷತೆಗೆ ರಕ್ಷಣಾ ಸಾಧನಗಳಾಗಿ ಪಿಪಿಇ ಕಿಟ್‌ಗಳನ್ನು ರೂಪಿಸಲಾಗಿದೆ. ಇದರಲ್ಲಿ ಸೂಟ್‌ಗಳು, ಕಪ್ಪು ಕನ್ನಡಕಗಳು, ಮುಖ ಕವಚ, ಮಾಸ್ಕ್, ಕೈಗವಸು, ತಲೆ ಹೊದಿಕೆ ಮತ್ತು ಶೂ ಹೊದಿಕೆಗಳು ಸೇರಿವೆ. ಪಿಪಿಇ ಕಿಟ್‌ಗಳನ್ನು ಮಾತ್ರ ರಫ್ತು ಮಾಡಬೇಕು. ಅದರ ಭಾಗಗಳ ರಫ್ತಿಗೆ ನಿಷೇಧ ಮುಂದುವರಿದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಗೋಯಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರತೀ ತಿಂಗಳೂ 50 ಲಕ್ಷ ಪಿಪಿಇ ಕಿಟ್‌ಗಳನ್ನು ರಫ್ತು ಮಾಡಲು ಅರ್ಹ ಅರ್ಜಿದಾರರಿಗೆ ರಫ್ತು ಪರವಾನಿಗೆ ನೀಡಲು ನಿರ್ಧರಿಸಲಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ ದಡಿ ರಫ್ತು ವ್ಯವಹಾರಕ್ಕೆ ಉತ್ತೇಜನ ದೊರಕಲಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News