×
Ad

ಭಾರತದ ಭೂಭಾಗದ 423 ಮೀಟರ್ ನಷ್ಟು ಪ್ರದೇಶವನ್ನು ಅತಿಕ್ರಮಿಸಿದ ಚೀನಾ: ಉಪಗ್ರಹ ಚಿತ್ರಗಳಲ್ಲಿ ಸೆರೆ

Update: 2020-06-29 19:55 IST
Photo: NDTV

ಹೊಸದಿಲ್ಲಿ: ಚೀನಿ ಸೇನೆ ಗಲ್ವಾನ್ ಕಣಿವೆಯ ಗಡಿ ಭಾಗದಲ್ಲಿ ಭಾರತದ ಭೂಭಾಗದ 423 ಮೀಟರ್ ನಷ್ಟು ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂದು ಉಪಗ್ರಹಗಳು ತೋರಿಸುತ್ತಿವೆ ಎಂದು ndtv.com ವರದಿ ಮಾಡಿದೆ.

16 ಚೀನಿ ಟೆಂಟ್ ಗಳು, ಟಾರ್ಪಾಲಿನ್ ಗಳು, ಒಂದು ದೊಡ್ಡ ಅಡಗುದಾಣ ಮತ್ತು ಕನಿಷ್ಠ 14 ವಾಹನಗಳು ಭಾರತದ 423 ಮೀ. ಭೂಭಾಗದಲ್ಲಿದೆ ಎನ್ನುವುದನ್ನು ಜೂನ್ 25ರಂದು ತೆಗೆಯಲಾದ ಉಪಗ್ರಹ ಚಿತ್ರಗಳು ತೋರಿಸುತ್ತದೆ ಎಂದು ವರದಿ ತಿಳಿಸಿದೆ.

ಇತ್ತೀಚೆಗೆ ಲಡಾಖ್ ನ ಗಲ್ವಾನ್ ನಲ್ಲಿ ಚೀನಾ ಸೈನಿಕರ ಜೊತೆ ನಡೆದ ಘರ್ಷಣೆಯಲ್ಲಿ ಒಬ್ಬರು ಅಧಿಕಾರಿ ಸೇರಿದಂತೆ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News