ವಿಂಬಲ್ಡನ್ ರದ್ಧತಿ: ಬ್ರಿಟಿಷ್ ಟೆನಿಸ್‌ಗೆ ಆರ್ಥಿಕ ಪರಿಣಾಮ ಉಂಟಾಗದು

Update: 2020-06-29 17:49 GMT

  ನ್ಯೂಯಾರ್ಕ್, ಜೂ.29: ಈ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗ ದಿಂದಾಗಿ ವಿಂಬಲ್ಡನ್ ಚಾಂಪಿಯನ್‌ಶಿಪ್ ರದ್ದತಿಯು ಬ್ರಿಟಿಷ್ ಟೆನಿಸ್ ಮೇಲೆ ಯಾವುದೇ ದೊಡ್ಡ ಆರ್ಥಿಕ ಪರಿಣಾಮ ಉಂಟಾಗದು ಎಂದು ಆಲ್ ಇಂಗ್ಲೆಂಡ್ ಕ್ಲಬ್‌ನ ನಿರ್ಗಮನ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಲೂಯಿಸ್ ಹೇಳಿದ್ದಾರೆ.

 ಹುಲ್ಲುಹಾಸಿನ ಗ್ರಾನ್‌ಸ್ಲಾಮ್ ಸೋಮವಾರದಿಂದ ಪ್ರಾರಂಭವಾಗ ಬೇಕಿತ್ತು. ಆದರೆ ಈ ತನಕ ಪ್ರಾರಂಭ ಗೊಂಡಿಲ್ಲ. 2ನೆಯ ಮಹಾಯುದ್ಧದ ನಂತರ ಮೊದಲ ಬಾರಿಗೆ ಇದು ರದ್ದುಗೊಂಡಿತು.

ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್ (ಎಇಎಲ್‌ಟಿಸಿ ) ತನ್ನ ಖರ್ಚು ಯೋಜನೆಗಳನ್ನು ಮೊಟಕುಗೊಳಿಸಬೇಕಾಗಿಲ್ಲ ಎಂದು ಹೇಳಿದರು.

‘‘ನಾವು ಇನ್ನೂ ಉತ್ತಮ ಸ್ಥಾನದಲ್ಲಿದ್ದೇವೆ, ನಾವು ಆರ್ಥಿಕವಾಗಿ ತುಂಬಾ ಸ್ಥಿರವಾಗಿದ್ದೇವೆ. ಬ್ರಿಟಿಷ್ ಟೆನಿಸ್ ಉತ್ತಮವಾಗಿ ರಕ್ಷಿಸಲ್ಪಡುತ್ತದೆ’’ ಎಂದರು.

ಆದಾಗ್ಯೂ ಮುಂದಿನ ವರ್ಷ ವಿಂಬಲ್ಡನ್ ಇದೇ ರೀತಿಯ ವಿಮಾ ರಕ್ಷಣೆಯನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದರು.

ಆಗಸ್ಟ್ ಅಂತ್ಯದಿಂದ ಯುಎಸ್ ಓಪನ್ ನಿಗದಿತ ರೀತಿಯಲ್ಲಿ ಮುಂದುವರಿಯುತ್ತಿದ್ದರೆ, ಫ್ರೆಂಚ್ ಓಪನ್ ಮೇ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಸಾಗಿದೆ ಮತ್ತು ಲೆವಿಸ್ ನಂತರ ಬರುವ ಸ್ಯಾಲಿ ಬೋಲ್ಟನ್, ಎಇಎಲ್ಟಿಸಿ ಪಂದ್ಯಾವಳಿಗಳಿಂದ ತಾವು ಮಾಡಬಹುದಾದ ಎಲ್ಲವನ್ನು ಕಲಿಯುತ್ತೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News