ಮತ್ತೆ ಕೋರ್ಟ್ ಗೆ ಹೋಗಲಿರುವ ಶೂಟರ್ ಅಭಿಷೇಕ್ ವರ್ಮಾ !

Update: 2020-06-29 17:53 GMT

ಹೊಸದಿಲ್ಲಿ, ಜೂ.29: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಿಸ್ತೂಲ್ ಎತ್ತಿಕೊಂಡು ಶೂಟಿಂಗ್‌ನಲ್ಲಿ ಸಾಕಷ್ಟು ಪದಕಗಳನ್ನು ಗೆದ್ದ ಅಭಿಷೇಕ್ ವರ್ಮಾ ಮತ್ತೆ ಕೋರ್ಟ್‌ಗೆ ಹೋಗಲಿದ್ದಾರೆ. ವಕೀಲರಾಗಿದ್ದ ಅಭಿಷೇಕ್ ವರ್ಮಾ ಅವರು ಶೂಟಿಂಗ್ ಮತ್ತು ಕಾನೂನು ಅಭ್ಯಾಸದ ನಡುವೆ ಸಮತೋಲನವನ್ನು ಸಾಧಿಸುವ ವಿಶ್ವಾಸ ಹೊಂದಿದ್ದಾರೆ.

ಕಂಪ್ಯೂಟರ್ ವಿಜ್ಞಾನದಲ್ಲಿ ಬಿಟೆಕ್ ಪಡೆದಿರುವ ಬಹುಮುಖಿ ವರ್ಮಾ, ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಾದಿಸಲು ಬಯಸುತ್ತಾರೆ.

 ಕೊರೋನ ವೈರಸ್ ಸೋಂಕು ಕಾರಣದಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದೀಗ ಅಭಿಷೇಕ್ ವರ್ಮಾ ಉನ್ನತ ಆದ್ಯತೆಯ ಶೂಟಿಂಗ್ ಜೊತೆಗೆ ಕಾನೂನು ಅಭ್ಯಾಸವನ್ನು ಮಾಡಲಿದ್ದಾರೆ.

ಒಲಿಂಪಿಕ್ಸ್ ನಂತರ ವಕೀಲ ವೃತ್ತಿ ಕೈಗೊಳ್ಳುವ ಯೋಜನೆಯಲ್ಲಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಒಲಿಂಪಿಕ್ಸ್ ಮುಂದೂಡಲ್ಪಟ್ಟಿತು . ಒಲಿಂಪಿಕ್ಸ್ ಕೂಡ ಒಂದು ವರ್ಷ ದೂರವಿರು ವುದರಿಂದ ಅಭ್ಯಾಸಕ್ಕೆ ಸೇರುವ ಯೋಜನೆ ಇದೆ ಎಂದು ವರ್ಮಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

 ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಾಧೀಶರ ಮಗನಾಗಿರುವ ವರ್ಮಾ, ಯಾವಾಗಲೂ ತನ್ನ ತಂದೆಯ ಸುತ್ತಲೂ ಬಂದೂಕು ಹಿಡಿದಿರುವ ಅಂಗರಕ್ಷಕರನ್ನು ನೋಡುತ್ತಿದ್ದರು. ಶೂಟಿಂಗ್ ಕಲಿತು ವಿವಿಧ ಇವೆಂಟ್‌ಗಳಲ್ಲಿ ಸ್ಪರ್ಧಿಸುವ ಮೂಲಕ ಉತ್ತಮ ಶೂಟರ್ ಆಗಿ ರೂಪುಗೊಂಡರು.

  ಅಭಿಷೇಕ್ ವರ್ಮಾ ಕೋವಿಡ್-19 ಕಾರಣ ದಿಂದಾಗಿ ಚಂಡೀಗಢದಲ್ಲಿರುವ ತನ್ನ ನಿವಾಸ ಬಿಟ್ಟು ಹೊರ ಬರುತ್ತಿಲ್ಲ. 30 ವರ್ಷದ ವರ್ಮಾ ವ್ಯಾಯಾಮವನ್ನು ತಮ್ಮ ಮನೆಯಲ್ಲಿಯೇ ಮಾಡುತ್ತಿದ್ದಾರೆ. ಮಿನಿ ಜಿಮ್ನಾಷಿಯಂನ್ನು ಸ್ಥಾಪಿಸಿದ್ದಾರೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅವರು ತಯಾರಿ ನಡೆಸುತ್ತಿದ್ದಾರೆ.

  ದೈಹಿಕ ಚಟುವಟಿಕೆಯಲ್ಲದೆ, 2017 ರಲ್ಲಿ ಗುರಗಾಂವ್‌ನಲ್ಲಿ ಏಕಲವ್ಯ ಶೂಟಿಂಗ್ ಅಕಾಡೆಮಿಗೆ ದಾಖಲಾಗಿದ್ದ ವರ್ಮಾ ಕೂಡ ಯೋಗ ಮತ್ತು ಧ್ಯಾನದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆ.

   ವರ್ಮಾ 2019ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೀಜಿಂಗ್ ವಿಶ್ವಕಪ್‌ನಲ್ಲಿ ವರ್ಮಾ 2008ರ ಒಲಿಂಪಿಕ್ಸ್ ಚಾಂಪಿಯನ್ ಪಾಂಗ್ ವೀ ಮತ್ತು 10 ಮೀಟರ್ ಏರ್ ಪಿಸ್ತೂಲ್ ಈವೆಂಟ್‌ನಲ್ಲಿ ಮಾಜಿ ವಿಶ್ವ ದಾಖಲೆ ಹೊಂದಿರುವ ಓಲೆಹ್ ಒಮೆಲ್ಚಕ್ ಅವರನ್ನು ಮಣಿಸಿ ಚಿನ್ನ ಗೆದ್ದರು ಮತ್ತು ಶೂಟಿಂಗ್‌ನಲ್ಲಿ ದೇಶದ ಪರ ಐದನೇ ಒಲಿಂಪಿಕ್ಸ್ ಕೋಟಾವನ್ನು ಭದ್ರಪಡಿಸಿದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ನಡೆದ ರಿಯೊ ಡಿ ಜನೈರೊ ವಿಶ್ವಕಪ್‌ನಲ್ಲಿ ತಮ್ಮ ಎರಡನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News