ಫೈನಲ್ ಫಿಕ್ಸಿಂಗ್: ಅರವಿಂದ ಡಿ ’ಸಿಲ್ವಾಗೆ ಸಮನ್ಸ್

Update: 2020-06-29 18:00 GMT

ಕೊಲಂಬೊ, ಜೂ.29: 2011ರ ಐಸಿಸಿ ವಿಶ್ವಕಪ್ ಫೈನಲ್ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರವಿಂದ ಡಿ’ ಸಿಲ್ವಾ ಅವರನ್ನು ಶ್ರೀಲಂಕಾದ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ವಿಭಾಗವು ಕರೆಸಿದೆ ಎಂದು ಶ್ರೀಲಂಕಾದ ‘ಡೈಲಿ ಮಿರರ್’ ವರದಿ ಮಾಡಿದೆ.

 ಲಂಕಾ ಅರವಿಂದ ಡಿ’ ಸಿಲ್ವಾ 2011ರ ವಿಶ್ವಕಪ್ ವೇಳೆ ಎಸ್‌ಎಲ್ ಸಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಸಿಲ್ವಾ ಅವರ ಹೇಳಿಕೆಯನ್ನು ಪೊಲೀಸರು ಮಂಗಳವಾರ ದಾಖಲಿಸಲಿರುವರು ಎಂದು ಎಸ್‌ಎಸ್‌ಪಿ ಡಬ್ಯುಎಎಚ್ ಫೊನ್ಸೆಕಾ ತಿಳಿಸಿದ್ದಾರೆ.

  ಈ ಹಿಂದೆ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಾಗೆ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ‘‘ನನ್ನ ಅನುಮಾನವನ್ನು ತನಿಖೆ ಮಾಡಬೇಕೆಂದು ನಾನು ಬಯಸುತ್ತೇನೆ ’’ಎಂದು ಅಲುತ್ಗಮಗೆ ಸುದ್ದಿಗಾರರಿಗೆ ತಿಳಿಸಿದರು.

 2011ರ ವಿಶ್ವಕಪ್‌ನಲ್ಲಿ ಗೌತಮ್ ಗಂಭೀರ್ (97) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (91) ಅವರ ಅಪೂರ್ವ ಬ್ಯಾಟಿಂಗ್ ನೆರವಿನಲ್ಲಿ ಭಾರತ 275 ರನ್ ಗಳಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.

‘‘ನಾವು 2011ರ ವಿಶ್ವಕಪ್‌ನ್ನು ಮಾರಾಟ ಮಾಡಿದ್ದೇವೆ ಎಂದು ಇಂದು ನಾನು ನಿಮಗೆ ಹೇಳುತ್ತಿದ್ದೇನೆ, ನಾನು ಕ್ರೀಡಾ ಸಚಿವನಾಗಿದ್ದಾಗ ಇದನ್ನು ಹೇಳಿದ್ದೇನೆ ’’ಎಂದು ಆ ಸಮಯದಲ್ಲಿ ಕ್ರೀಡಾ ಸಚಿವರಾಗಿದ್ದ ಅಲುತ್ಗಮಾಗೆ ಹೇಳಿದ್ದಾರೆ.

ಆ ಸಮಯದಲ್ಲಿ ಶ್ರೀಲಂಕಾದ ಕ್ಯಾಪ್ಟನ್ ಸಂಗಕ್ಕರ ಅವರು ಭ್ರಷ್ಟಾಚಾರ ವಿರೋಧಿ ತನಿಖೆಗೆ ಪುರಾವೆಗಳನ್ನು ಸಲ್ಲಿಸುವಂತೆ ಕೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News