ಮಾಸ್ಕ್ ಧರಿಸಲು ನೆನಪಿಸಿದ ವಿಕಲಚೇತನ ಮಹಿಳೆಗೆ ರಾಡ್ ನಿಂದ ಥಳಿಸಿದ ಸರಕಾರಿ ಅಧಿಕಾರಿ

Update: 2020-06-30 10:18 GMT

ಹೈದರಾಬಾದ್: ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂಬುದನ್ನು ನೆನಪಿಸಿದ ವಿಕಲಚೇತನ ಮಹಿಳಾ ಉದ್ಯೋಗಿಯ ಕೂದಲನ್ನೆಳೆದು ಆಕೆಗೆ ಕಬ್ಬಿಣದ ರಾಡ್‍ ನಿಂದ ಸರಕಾರಿ ಸರಕಾರಿ ಅಧಿಕಾರಿಯೊಬ್ಬ ಥಳಿಸಿದ ಘಟನೆ ನೆಲ್ಲೂರು ಜಿಲ್ಲೆಯ ಸರಕಾರಿ ಕಚೇರಿಯಲ್ಲಿ ನಡೆದಿದೆ. ಘಟನೆ ಸೀಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಈಗ ವೈರಲ್ ಆಗಿದೆ.

ಆರೋಪಿ ಭಾಸ್ಕರ್ ನೆಲ್ಲೂರಿನ ಆಂಧ್ರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಹೋಟೆಲ್ ಒಂದರ ಉಪ ಪ್ರಬಂಧಕನಾಗಿದ್ದಾನೆ. ಕಚೇರಿಯಲ್ಲಿ ಇತರ ಸಹೋದ್ಯೋಗಿಗಳ ಎದುರೇ ವಿಕಲಚೇತನ ಸಹೋದ್ಯೋಗಿಯ ಮೇಲೆ ದೌರ್ಜನ್ಯವೆಸಗಿದ್ದಾನೆ.

ವೈರಲ್ ಆಗಿರುವ ವೀಡಿಯೋದಲ್ಲಿ ಮಾಸ್ಕ್ ಧರಿಸದ ಭಾಸ್ಕರ್ ತನ್ನ ಕ್ಯಾಬಿನ್ ಹೊರಗೆ ಬಂದು ಮಹಿಳೆಯ ಕೂದಲೆಳೆದು ಆಕೆಗೆ ಥಳಿಸಿದಾಗ ಇತರ ಸಹೋದ್ಯೋಗಿಗಳು ಆತನನ್ನು ತಡೆಯಲು ಯತ್ನಿಸುವುದು ಕಾಣಿಸುತ್ತದೆ.

ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆಂಧ್ರ ಪ್ರದೇಶ ಪ್ರದೇಶ ಪ್ರವಾಸೋದ್ಯಮ ಸಚಿವೆ ಅವಂತಿ ಶ್ರೀನಿವಾಸ್ ಘಟನೆಯನ್ನು ಖಂಡಿಸಿದ್ದಾರಲ್ಲದೆ ಆರೋಪಿಯನ್ನು ಸೇವೆಯಿಂದ ವಜಾಗೊಳಿಸುವಂತೆ ಆದೇಶಿಸಿದ್ದಾರೆ.

ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದ. ಇಂದು ಬೆಳಿಗ್ಗೆ ಆತನನ್ನು ಬಂಧಿಸಲಾಗಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News