ಅಮೆರಿಕದಲ್ಲಿ ಒಂದೇ ದಿನ 52,000 ಕೊರೋನ ವೈರಸ್ ಪ್ರಕರಣ

Update: 2020-07-02 06:00 GMT

ಲಾಸ್ ಏಂಜಲೀಸ್, ಜು.2: ಅಮೆರಿಕದಲ್ಲಿ ಇದೇ ಮೊದಲ ಬಾರಿ ದೈನಂದಿನ ಹೊಸ ಕೊರೋನ ವೈರಸ್ ಪ್ರಕರಣ 50,000ದ ಗಡಿ ದಾಟಿದೆ.

ವಿಶ್ವದಲ್ಲಿ ಅತಿ ಹೆಚ್ಚು ಕೊರೋನ ಪೀಡಿತ ದೇಶವಾಗಿರುವ ಅಮೆರಿಕದಲ್ಲಿ ಕಾಲಿಫೋರ್ನಿಯಾದಿಂದ ಫ್ಲೋರಿಡಾದ ತನಕ ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೂ ಬೀಚ್‌ಗಳನ್ನು ಮುಚ್ಚಲಾಗಿದೆ. ಕಳೆದ ಒಂದು ವಾರದಿಂದ ಜಾಗತಿಕ ಮಟ್ಟದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಗರಿಷ್ಟ ಮಟ್ಟಕ್ಕೆ ತಲುಪಿದೆ.

ಅಮೆರಿಕವೊಂದರಲ್ಲೇ ಕಳೆದ 24 ಗಂಟೆಗಳ ಅವಧಿಯಲ್ಲಿ 52,000 ಹೊಸ ಕೊರೋನ ವೈರಸ್ ಪ್ರಕರಣ ದಾಖಲಾಗಿದೆ. ಅಮೆರಿಕದ ಹಲವು ರಾಜ್ಯಗಳು ಹೊರಗಿನಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ಜಾರಿಗೊಳಿಸಿದೆ. ಕ್ಯಾಲಿಫೋರ್ನಿಯಾದಲ್ಲಿ ಒಳಾಂಗಣ ಡೈನಿಂಗ್‌ನ್ನು ರದ್ದುಪಡಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News