ವಯನಾಡ್‍: ಆದಿವಾಸಿ ವಿದ್ಯಾರ್ಥಿಗಳ ಆನ್ಲೈನ್ ತರಗತಿಗಳಿಗಾಗಿ 175 ಸ್ಮಾರ್ಟ್ ಟಿವಿ ಕೊಡುಗೆ ನೀಡಿದ ರಾಹುಲ್

Update: 2020-07-02 09:57 GMT

ವಯನಾಡ್: ಕೊರೋನವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳಿಗೆ ಹಾಜರಾಗಲು ತಮ್ಮ ಲೋಕಸಭಾ ಕ್ಷೇತ್ರವಾದ ವಯನಾಡ್ ನ ಕಲ್ಪೆಟ್ಟ ಪಟ್ಟಣದ ಆದಿವಾಸಿ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ 175 ಸ್ಮಾರ್ಟ್ ಟಿವಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗಾಗಿ ಅಲ್ಲಿನ ಪಿಣರಾಯಿ ವಿಜಯನ್ ಸರಕಾರ "ಫಸ್ಟ್ ಬೆಲ್" ಎಂಬ ಹೆಸರಿನಲ್ಲಿ ಆನ್ಲೈನ್ ತರಗತಿಗಳನ್ನು ಕೆಐಟಿಇ ವಿಕ್ಟರ್ಸ್ ವಾಹಿನಿ ಮತ್ತಿತರ ಮಾಧ್ಯಮಗಳ ಮೂಲಕ ನಡೆಸುತ್ತಿದೆ.

ಬುಧವಾರ ನೀಡಲಾದ 175 ಸ್ಮಾರ್ಟ್ ಟೆಲಿವಿಷನ್ ಗಳು ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ನೀಡಿದ ಕೊಡುಗೆಯ ಎರಡನೇ ಕಂತಾಗಿದೆ. ಈ ಹಿಂದೆ ರಾಹುಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಆದಿವಾಸಿ ವಿದ್ಯಾರ್ಥಿಗಳಿಗೆ ಆನ್‍ ಲೈನ್ ತರಬೇತಿಗಾಗಿ 50 ಟೆಲಿವಿಷನ್ ‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿತ್ತು.

ಕೇರಳ ಸರಕಾರದ ಅನ್ಲೈನ್ ತರಗತಿಗಳಿಗೆ ಹಾಜರಾಗಲು ಆದಿವಾಸಿ ವಿದ್ಯಾರ್ಥಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೇ ಇರುವ ಕುರಿತಂತೆ ಸರಕಾರದ ಗಮನ ಸೆಳೆದು ಈ ಹಿಂದೆ ರಾಹುಲ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News