ದ್ವಿಪಕ್ಷೀಯ ಸಹಕಾರಕ್ಕೆ 'ಕೃತಕ ನಿರ್ಬಂಧಗಳು' ಭಾರತಕ್ಕೆ ಹಾನಿ ಮಾಡುತ್ತದೆ: ಚೀನಾ

Update: 2020-07-03 09:51 GMT

  ಬೀಜಿಂಗ್, ಜು.3: ದ್ವಿಪಕ್ಷೀಯ ಸಹಕಾರಕ್ಕೆ 'ಕೃತಕ ನಿರ್ಬಂಧಗಳು' ಭಾರತದ ಹಿತಾಸಕ್ತಿಗೆ ಧಕ್ಕೆ ತರುತ್ತದೆ. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಚೀನಾ ಇಂದು ಹೇಳಿದೆ.

ಭಾರತದಲ್ಲಿ ಚೀನಾದ ವ್ಯವಹಾರಗಳ ಹಕ್ಕುಗಳನ್ನು ಎತ್ತಿ ಹಿಡಿಯಲು ಬೀಜಿಂಗ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಬೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತದಿಂದ ಟಿಕ್‌ಟಾಕ್ ಸಹಿತ 59 ಆ್ಯಪ್‌ಗಳ ನಿಷೇಧ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಲಡಾಖ್‌ಗೆ ಅಚ್ಚರಿ ಭೇಟಿ ನೀಡಿದ ಬೆನ್ನಿಗೇ ಚೀನಾದಿಂದ ಈ ಹೇಳಿಕೆ ಹೊರಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News