ಮುಂಬೈ ಮಹಾನಗರದಲ್ಲಿ ಮಳೆಯ ಆರ್ಭಟ: ರೆಡ್ ಅಲರ್ಟ್ ಘೋಷಣೆ

Update: 2020-07-04 05:07 GMT

ಮುಂಬೈ, ಜು.4: ಮಹಾನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೊರೋನ ಸೃಷ್ಟಿಸಿರುವ ತಲ್ಲಣದ ನಡುವೆಯೂ ಮುಂಬೈ ಮಹಾನಗರ ಸೇರಿದಂತೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಮುನ್ನಚ್ಚರಿಕೆ ಕ್ರಮ ವಹಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಕೇಂದ್ರ ಸೂಚಿಸಿದೆ.

ಭಾರೀ ಮಳೆ ಸುರಿದ ಕಾರಣ ಶುಕ್ರವಾರ ಮುಂಬೈ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನಗರದ ಗಾಂಧಿ ಮಾರ್ಕೆಟ್,ಅಂಧೇರಿ,ಕೊಲಬಾ, ಕುರ್ಲಾ ಹಾಗೂ ಸಯನ್‌ನಲ್ಲಿನ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ಪರದಾಡುವಂತಾಗಿತ್ತು.

ಶನಿವಾರ ಮುಂಬೈ, ರಾಯಗಢ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮುಂದಿನ 24 ಗಂಟೆಗಳ ಕಾಲ ಅಂದರೆ ಜುಲೈ 3ರಿಂದ 4ರ ವರೆಗೆ ಮುಂಬೈ, ರಾಯಗಢ ಹಾಗೂ ರತ್ನಗಿರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News