ಕೋವಿಡ್ ಲಸಿಕೆ: ವಿವಾದ ಸೃಷ್ಟಿಸಿದ ಐಸಿಎಂಆರ್ ತರಾತುರಿ

Update: 2020-07-04 05:47 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಲಸಿಕೆ ಬಿಡುಗಡೆಗೊಳಿಸುವ ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ತರಾತುರಿ ಹೊಸ ವಿವಾದಕ್ಕೆ ಕಾರಣವಾಗಿದೆ. 

ಕ್ಲಿನಿಕಲ್ ಪರೀಕ್ಷೆಗೆ ತ್ವರಿತ ಅನುಮೋದನೆ ನೀಡುವಂತೆ ಮತ್ತು ಆಗಸ್ಟ್ 15ರ ವೇಳೆಗೆ ಲಸಿಕೆ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಐಸಿಎಂಆರ್ ಬರೆದಿರುವ ಪತ್ರದ ಬಗ್ಗೆ ವೈದ್ಯಕೀಯ ಹಾಗೂ ವೈಜ್ಞಾನಿಕ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.

ಕೋವಿಡ್-19 ಸೋಂಕಿನ ಸಂಕೀರ್ಣತೆ ಹಿನ್ನೆಲೆಯಲ್ಲಿ ಇಂಥ ಗಡುವಿನಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ? ಮಾನವನ ಮೇಲೆ ಪರೀಕ್ಷೆಗೆ ನಿಗದಿತ ಸಮಯಾವಕಾಶ ಬೇಕಾಗುತ್ತದೆ ಎನ್ನುವುದು ವಿಜ್ಞಾನಿಗಳ ವಾದ.

ಭಾರತ್ ಬಯೋಟೆಕ್ ಆರಂಭಿಕ ಹಂತದ ಮಾನವ ಪ್ರಯೋಗಕ್ಕೆ ಅನುಮೋದನೆ ಪಡೆದಿದೆ. ಈ ಸಂಬಂಧ ಭಾರತ್ ಬಯೋಟೆಕ್ ಮತ್ತು ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ಆಸ್ಪತ್ರೆಗಳಿಗೆ ಬರೆದ ಪತ್ರದಲ್ಲಿ ಐಸಿಎಂಆರ್ ನಿರ್ದೇಶಕ ಜನರಲ್ ಬಲರಾಂ ಭಾರ್ಗವ, “ಸಾರ್ವಜನಿಕ ಆರೋಗ್ಯ ತುರ್ತಿನ ಹಿನ್ನೆಲೆಯಲ್ಲಿ ಮತ್ತು ಲಸಿಕೆ ಬಿಡುಗಡೆ ಮಾಡುವ ತುರ್ತು ಅಗತ್ಯತೆಯ ಹಿನ್ನೆಲೆಯಲ್ಲಿ ಕ್ಲಿನಿಕಲ್ ಟ್ರಯಲ್‍ಗೆ ಸಂಬಂಧಿಸಿದ ಅನುಮೋದನೆಯನ್ನು ಕ್ಷಿಪ್ರವಾಗಿ ನೀಡಬೇಕು ಹಾಗೂ ಜುಲೈ 7ರ ಒಳಗೆ ನೋಂದಾವಣೆ ಆರಂಭಿಸಬೇಕು” ಎಂದು ಸೂಚಿಸಿದ್ದಾರೆ. ಇದಕ್ಕೆ ಬದ್ಧವಾಗದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News