2019-20ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

Update: 2020-07-04 17:01 GMT

ಹೊಸದಿಲ್ಲಿ,ಜು.5: ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ಹಿನ್ನೆಲೆಯಲ್ಲಿ 2019-20ರ ಸಾಲಿನ ವಿತ್ತೀಯ ವರ್ಷಕ್ಕಾಗಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇರುವ ಅಂತಿಮ ಗಡುವನ್ನು ಕೇಂದ್ರ ಸರಕಾರವು ನವೆಂಬರ್ 30ರವರೆಗೆ ವಿಸ್ತರಿಸಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಶನಿವಾರ ಹೇಳಿಕೆ ನೀಡಿ ‘‘ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು,ನಾವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅಂತಿಮ ಗಡುವನ್ನು ಇನ್ನೂ ವಿಸ್ತರಿಸಿದ್ದೇವೆ ’’ ಎಂದು ತಿಳಿಸಿದೆ.

 ಈ ವಾರಾರಂಭದಲ್ಲಿ ಕೇಂದ್ರ ಸರಕಾರವು 2019-20ನೇ ವಿತ್ತ ವರ್ಷದ ಆದಾಯತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅಂತಿಮ ಗಡುವನ್ನು ಜುಲೈ 31ಕ್ಕೆ ವಿಸ್ತರಿಸಿತ್ತು.

  ಕೋವಿಡ್-19 ಹಾವಳಿ ಹಾಗೂ ಲಾಕ್‌ಡನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ತೆರಿಗೆ ಪಾವತಿದಾರರು ಸಮಾಧಾನದ ನಿಟ್ಟುಸಿರೆಳೆಯುವಂತೆ ಮಾಡುವುದಕ್ಕಾಗಿ, ಐಟಿ ಇಲಾಖೆಯು, ತೆರಿಗೆ ಉಳಿತಾಯ ಹೂಡಿಕೆಗಾಗಿನ ಅಂತಿಮ ಗಡುವನ್ನು 2020ರ ಜುಲೈ31ರವರೆಗೆ ವಿಸ್ತರಿಸಿದೆ.

2019-20ನೇ ಸಾಲಿನ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಅಥವಾ ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್)ದ ಹೇಳಿಕೆಗಳ ಸಲ್ಲಿಕೆಯ ಅಂತಿಮ ಅವಧಿಯನ್ನು ಕೂಡಾ ಕ್ರಮವಾಗಿ ಜುಲೈ 31 ಹಾಗೂ ಆಗಸ್ಟ್ 15ರವರೆಗೆ ವಿಸ್ತರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News