ಜು.6ರಿಂದ 19ರವರೆಗೆ ಆರು ನಗರಗಳಿಂದ ಕೋಲ್ಕತಾಕ್ಕೆ ವಿಮಾನಯಾನಗಳಿಗೆ ನಿಷೇಧ

Update: 2020-07-04 17:49 GMT

ಕೋಲ್ಕತಾ,ಜು.4: ದಿಲ್ಲಿ,ಮುಂಬೈ,ಪುಣೆ,ನಾಗಪುರ,ಚೆನ್ನೈ ಮತ್ತು ಅಹ್ಮದಾಬಾದ್‌ಗಳಿಂದ ಕೋಲ್ಕತಾಕ್ಕೆ ವಿಮಾನಯಾನಗಳನ್ನು ಜು.6ರಿಂದ ಜು.19ರವರೆಗೆ ನಿಷೇಧಿಸಲಾಗಿದ್ದು,ಕೋಲ್ಕತಾ ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಹ್ಯಾಂಡಲ್ ಶನಿವಾರ ಇದನ್ನು ಪ್ರಕಟಿಸಿದೆ.

 ಈ ಆರು ನಗರಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ವೈರಸ್ ಪ್ರಕರಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ನಗರಗಳಿಂದ ಕೋಲ್ಕತಾಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಯಾನಗಳನ್ನು ಅಮಾನತುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರಕ್ಕೆ ಪತ್ರವನ್ನು ಬರೆದಿದ್ದರು.

ಜು.6ರಿಂದ ಎರಡು ವಾರಗಳ ಕಾಲ ದಿಲ್ಲಿ,ಮುಂಬೈ,ಪುಣೆ,ನಾಗಪುರ,ಚೆನ್ನೈ,ಇಂದೋರ,ಅಹ್ಮದಾಬಾದ್ ಮತ್ತು ಸೂರತ್‌ನಂತಹ ಕೊರೋನ ವೈರಸ್ ಹಾಟ್‌ಸ್ಪಾಟ್‌ಗಳಿಂದ ರಾಜ್ಯಕ್ಕೆ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸುವಂತೆ ಪಶ್ಚಿಮ ಬಂಗಾಳ ಸರಕಾರವು ನಾಗರಿಕ ವಾಯುಯಾನ ಸಚಿವಾಲಯವನ್ನು ಕೋರಿತ್ತು. ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹಾ ಅವರೂ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ರಾಜ್ಯ ಸರಕಾರವು ವ್ಯಕ್ತಪಡಿಸಿರುವ ಕಳವಳವನ್ನು ಪರಿಗಣಿಸುವಂತೆ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್ ಕರೋಲಾ ಅವರಿಗೆ ಪತ್ರವನ್ನು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News