ಅಭಿಮಾನಿಗಳ ಅನುಪಸ್ಥಿತಿಯಿಂದ ಮೊದಲ ಟೆಸ್ಟ್

Update: 2020-07-04 18:21 GMT

ಸೌತಾಂಪ್ಟನ್ , ಜು.4: ಇಲ್ಲಿ ಜುಲೈ 8ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರೇಕ್ಷಕರ ಅನುಪಸ್ಥಿತಿಯಿಂದ ತಂಡದ ಮೇಲೆ ಪರಿಣಾಮವಾಗದು ಎಂದು ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ಟೆಸ್ಟ್ ಸರಣಿಯನ್ನು ಮುಚ್ಚಿದ ಬಾಗಿಲುಗಳ ಹಿಂದೆ ಆಡಲಾಗುವುದು. ಎರಡನೇ ಮತ್ತು ಮೂರನೇ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ಜುಲೈ 16-20 ಮತ್ತು ಜುಲೈ 24-28ರ ತನಕ ನಡೆಯಲಿದೆ.

 22 ವರ್ಷದ ಬಲಗೈ ಬ್ಯಾಟ್ಸ್‌ಮನ್ ಪೋಪ್ ಅವರು ಪ್ರೇಕ್ಷಕರಿಲ್ಲದೆ ಆಟವಾಡುವುದು ಕ್ರಿಕೆಟ್‌ನ ಗುಣಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

      ಸ್ಟೋಕ್ಸ್ ಮತ್ತು ಬಟ್ಲರ್ ತಂಡಗಳ ನಡುವಿನ ಅಭ್ಯಾಸ ಪಂದ್ಯವು ಅಂತಿಮ ದಿನವಾಗಿರುವ ಶುಕ್ರವಾರ ಡ್ರಾದಲ್ಲಿ ಕೊನೆಗೊಂಡಿತು. ಬಟ್ಲರ್ ತಂಡದ ಪರ ಆಡಿದ ಪೋಪ್ ಮೊದಲ ಇನಿಂಗ್ಸ್‌ನಲ್ಲಿ 25 ರನ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 55 ರನ್ ಗಳಿಸಿದರು. ‘‘ಮೂರು ದಿನಗಳಲ್ಲಿ ಸ್ಪರ್ಧೆಯ ಗುಣಮಟ್ಟವು ನಿಜವಾಗಿಯೂ ಉನ್ನತ ದರ್ಜೆಯದ್ದಾಗಿತ್ತು. ನಾವು ಮೊದಲಿನಂತಿದ್ದೇವೆ ಹಾಗೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ’’ಎಂದು ಪೋಪ್ ಆಟದ ನಂತರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News