2020ರ ಕೊನೆಯಲ್ಲಿ ಇಂಗ್ಲೆಂಡ್‌ನ ಆ್ಯಂಬ್ರೊಸ್ ವಿದಾಯ

Update: 2020-07-04 18:25 GMT

ಲಂಡನ್, ಜು.4: ಇಂಗ್ಲೆಂಡ್ ತಂಡದ ಮಾಜಿ ಆಟಗಾರ ವಿಕೆಟ್ ಕೀಪರ್ ಟಿಮ್ ಆ್ಯಂಬ್ರೋಸ್2020 ವರ್ಷದ ಕೊನೆಯಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆ್ಯಂಬ್ರೋಸ್ ಒಟ್ಟು 11,349 ರನ್ ಗಳಿಸಿದ್ದಾರೆ. ವಾರ್ವಿಕ್‌ಶೈರ್ ಪರ ಆಟದಲ್ಲಿ 8,414 ರನ್ ಗಳಿಸಿದ್ದಾರೆ.

ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ 37ರ ಹರೆಯದ ಟಿಮ್ ಅವರು ‘‘ ನಿವೃತ್ತಿ ಹೊಂದಲು ಇದು ಸರಿಯಾದ ಸಮಯ. ಸಾಧ್ಯವಾದರೆ ಇನ್ನೂ 20 ವರ್ಷಗಳನ್ನು ಆಡಲು ನಾನು ಇಷ್ಟಪಡುತ್ತೇನೆ ಎಂದು ಒಪ್ಪಿಕೊಳ್ಳುವುದು ಕಷ್ಟದ ವಿಷಯ. ಆದರೆ ಈ ಪ್ರತಿಭಾವಂತ, ಶಕ್ತಿಯುತ ಮತ್ತು ಮಹತ್ವಾಕಾಂಕ್ಷೆಯ ಯುವ ತಂಡ ಕಟ್ಟಲು ಮತ್ತು ತಮ್ಮದೇ ಆದ ಛಾಪು ಮೂಡಿಸಲು ಇದು ಸರಿಯಾದ ಸಮಯ. ನಾನು ಕ್ಲಬ್ ಮತ್ತು ತಂಡವನ್ನು ಮೊದಲ ಸ್ಥಾನದಲ್ಲಿಡಲು ಶ್ರಮಿಸಿದೆ ’’ ಎಂದು ಆ್ಯಂಬ್ರೊಸ್ ಹೇಳಿರುವುದನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

 ಆ್ಯಂಬ್ರೊಸ್ ವಾರ್ವಿಕ್‌ಶೈರ್‌ನೊಂದಿಗೆ ಒಟ್ಟು 14 ವರ್ಷಗಳನ್ನು ಕಳೆದಿದ್ದಾರೆ.

 ಟಿಮ್ ತಂಡಕ್ಕೆ ನಾಲ್ಕು ಟ್ರೋಫಿಗಳನ್ನು ಗೆಲ್ಲಲು ನೆರವಾಗಿದ್ದಾರೆ. 2012ರಲ್ಲಿ ಕೌಂಟಿ ಚಾಂಪಿಯನ್‌ಶಿಪ್ , 2014 ರಲ್ಲಿ ಟಿ -20 ಬ್ಲಾಸ್ಟ್, 2010ರಲ್ಲಿ ಸಿಬಿ 40 ಮತ್ತು 2015ರಲ್ಲಿ ಲಂಡನ್ ಏಕದಿನ ಕಪ್‌ನ್ನು ಆ್ಯಂಬ್ರೊಸ್ ತಂಡ ಜಯಿಸಿತ್ತು. ಇಂಗ್ಲೆಂಡ್ ಪರ 11 ಟೆಸ್ಟ್, ಐದು ಏಕದಿನ ಮತ್ತು 1 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ, ಮೂರು ಮಾದರಿಯ ಕ್ರಿಕೆಟ್‌ಗಳಲ್ಲಿ 457 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News