ವಿಶ್ವದ ಅತ್ಯಂತ ದೊಡ್ಡ ಕೋವಿಡ್-19 ಆರೈಕೆ ಕೇಂದ್ರ ದಿಲ್ಲಿಯಲ್ಲಿ ಉದ್ಘಾಟನೆ

Update: 2020-07-05 07:21 GMT

ಹೊಸದಿಲ್ಲಿ, ಜು.5: ಛತರ್‌ಪುರದ ರಾಧಾಸ್ವಾಮಿ ಸತ್ಸಂಗ ಬಿಯಾಸ್‌ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ದೊಡ್ಡ ಕೋವಿಡ್-19 ಆರೈಕೆ ಕೇಂದ್ರ ಸರ್ದಾರ್ ಪಟೇಲ್ ಕೋವಿಡ್-19 ಆರೈಕೆ ಕೇಂದ್ರವನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರವಿವಾರ ಉದ್ಘಾಟಿಸಿದರು.

ಈ ಆರೈಕೆ ಕೇಂದ್ರ ಒಟ್ಟು 10,000 ಹಾಸಿಗೆಗಳನ್ನು ಒಳಗೊಂಡಿದೆ.ಲಕ್ಷಣರಹಿತ ಕೋರೊನಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು. ಮನೆಯಲ್ಲಿ ಪ್ರತ್ಯೇಕವಾಗಿ ವಾಸ ಮಾಡಲು ಸಾಧ್ಯವಾಗದಂತಹ ಲಕ್ಷಣರಹಿತ ಸೋಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

 ಈ ಆರೈಕೆ ಕೇಂದ್ರ 1,700 ಅಡಿ ಉದ್ದ,700 ಅಡಿ ಅಗಲ, ಸುಮಾರು 20 ಫುಟ್ಬಾಲ್ ಮೈದಾನಗಳಷ್ಟು ವಿಸ್ತಾರವಾಗಿದೆ. ಅಲ್ಲದೆ ಒಟ್ಟು 200 ಅಂಕಣಗಳನ್ನು ಒಳಗೊಂಡಿದ್ದು, ಇದರಲ್ಲಿ ತಲಾ 50 ಹಾಸಿಗೆಗಳನ್ನು ಹಾಕಲಾಗಿದೆ.

ದಿಲ್ಲಿ ಸರಕಾರ ಆಡಳಿತಾತ್ಮಕ ಬೆಂಬಲ ನೀಡಿದರೆ, ಇಂಡೋ-ಟಿಬೆಟನ್ ಗಡಿ ಪೊಲೀಸ್ ಪಡೆ ಆರೈಕೆ ಕೇಂದ್ರದ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News