24 ಕಿ.ಮೀ. ದೂರದ ಶಾಲೆಗೆ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕಿಗೆ ಎಸೆಸೆಲ್ಸಿಯಲ್ಲಿ 98.75 ಶೇ. ಅಂಕ

Update: 2020-07-05 11:19 GMT

ಹೊಸದಿಲ್ಲಿ: ವಿದ್ಯಾಭ್ಯಾಸಕ್ಕಾಗಿ 24 ಕಿ.ಮೀ. ದೂರದ ಶಾಲೆಗೆ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 98.75 ಶೇ. ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾಳೆ.

ತನ್ನ ಸಾಧನೆಯಿಂದ ಸಂತಸಗೊಂಡಿರುವ ರೋಶನಿ ಭದೋರಿಯಾ ಭವಿಷ್ಯದಲ್ಲಿ ನಾಗರಿಕ ಸೇವೆಗಳಲ್ಲಿ ವೃತ್ತಿ ಜೀವನ ನಡೆಸುವ ಗುರಿ ಹೊಂದಿದ್ದಾರೆ.

ಮಗಳ ಸಾಧನೆಯಿಂದ ಸಂತಸಗೊಂಡಿದ್ದೇನೆ ಎಂದು ಬಾಲಕಿಯ ತಂದೆ ಹೇಳಿದ್ದು, ಇನ್ನು ಮುಂದೆ ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಆತ ವೃತ್ತಿಯಲ್ಲಿ ಕೃಷಿಕನಾಗಿದ್ದಾರೆ.

ಮಧ್ಯಪ್ರದೇಶದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಾಗ 98.75 ಶೇ. ಅಂಕ ಗಳಿಸಿದ ರೋಷನಿ ರಾಜ್ಯದಲ್ಲಿ ಮೆರಿಟ್ ಪಟ್ಟಿಯಲ್ಲಿ 8 ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News