ಗ್ರೀನ್‌ವಿಲ್ಲೆ: ನೈಟ್‌ಕ್ಲಬ್ ಶೂಟೌಟ್; ಕನಿಷ್ಠ 12 ಮಂದಿಗೆ ಗಾಯ

Update: 2020-07-05 15:31 GMT

ಗ್ರೀನ್‌ವಿಲ್ಲೆ,ಜು.16: ದಕ್ಷಿಣ ಕರೋಲಿನಾದ ನೈಟ್‌ಕ್ಲಬ್ ಒಂದರಲ್ಲಿ ರವಿವಾರ ನಸುಕಿನಲ್ಲಿ ನಡೆದ ಶೂಟೌಟ್‌ನಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ.

  ರವಿವಾರ ಮುಂಜಾನೆ ಸುಮಾರು 2:00 ಗಂಟೆಯ ವೇಳೆಗೆ ಲ್ಯಾವಿಶ್ ಲಾಂಜ್ ನೈಟ್‌ಕ್ಲಬ್‌ನಲ್ಲಿ ಗುಂಡು ಹಾರಾಟ ನಡೆದಿದೆಯೆಂದು ಗ್ರೀನ್‌ವಿಲ್ಲೆ ಪೊಲೀಸ್ ವರಿಷ್ಠ ಲೆ.ಜಿಮ್ಮಿ ಬೋಲ್ಟ್ ತಿಳಿಸಿದ್ದಾರೆ.

  ಆದಾಗ್ಯೂ ಶೂಟೌಟ್ ಘಟನೆಗೆ ಸಂಬಂಧಿಸಿ ಯಾರನ್ನಾದರೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆಯೇ ಎಂಬ ಬಗ್ಗೆ ಈವರೆಗೆ ಸ್ಪಷ್ಟವಾದ ಮಾಹಿತಿ ಲಭಿಸಿಲ್ಲ. ಗುಂಡೆಸತದಿಂದ ಗಾಯಗೊಂಡವರ ಹೆಸರುಗಳನ್ನು ಹಾಗೂ ಅವರ ದೇಹಸ್ಥಿತಿಯ ಬಗ್ಗೆ ಯಾವುದೇ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News