ಮಂಜೇಶ್ವರ: 4 ಕೆ. ಜಿ ಗಾಂಜಾ ಸಹಿತ ಯುವಕನ ಬಂಧನ

Update: 2020-07-06 05:35 GMT

ಮಂಜೇಶ್ವರ: ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಬಚ್ಚಿಟ್ಟಿದ್ದ 4 ಕೆ.ಜಿ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತನನ್ನು ಬಂದಿಯೋಡು ಸಮೀಪದ ಅಡ್ಕದ ಬಾಡಿಗೆ ಕ್ವಾರ್ಟ್ರರ್ಸ್ ನಲ್ಲಿ ವಾಸವಿರುವ ಕುಕ್ಕಾರು ಮೂಲದ ಮುಹಮ್ಮದ್ ಬಾತಿಶಾ (36) ಎಂದು ಗುರುತಿಸಲಾಗಿದೆ.

ಈತನ ಕಾಮಗಾರಿ ನಡೆಯುತ್ತಿದ್ದ ಮನೆಯಲ್ಲಿ ಬಚ್ಚಿಡಲಾಗಿದ್ದ 4 ಕೆ. ಜಿ ಗಾಂಜಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕುಂಬಳೆ ಸಬ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News